BREAKING NEWSCITY CRIME NEWSDHARWADNAVANAGARPolitical news

ರಾಜ್ಯ ಸರ್ಕಾರದ ಮೂರು ವರ್ಷ ಭ್ರಮನಿರಸನ ಮತ್ತು ವೈಫಲ್ಯಗಳ ಸಂಭ್ರಮ: ಅರವಿಂದ ಬೆಲ್ಲದ್!

POWER CITYNEWS: HUBBALLI/ಹುಬ್ಬಳ್ಳಿ:
ರಾಜ್ಯ ಸರ್ಕಾರ ತನ್ನ 3 ವರ್ಷದ ಆಡಳಿತವನ್ನು ಸಾಧನಾ (sadhana)ಸಮಾವೇಶದ ಮೂಲಕ ಸಂಭ್ರಮಿಸುತ್ತಿರುವುದು ರಾಜ್ಯದ ಜನತೆಗೆ ಬಗೆದ ದ್ರೋಹ. ವಾಸ್ತವದಲ್ಲಿ ಇದು ಸಾಧನೆಯ ಸಮಾವೇಶವಲ್ಲ, 3 ವರ್ಷಗಳಲ್ಲಿ ರಾಜ್ಯವನ್ನು ಆರ್ಥಿಕ ಮತ್ತು ಆಡಳಿತಾತ್ಮಕವಾಗಿ ದಿವಾಳಿ ಮಾಡಿದ ವೈಫಲ್ಯಗಳ ಸಮಾವೇಶವಾಗಿದೆ ಎಂದು ವಿಧಾನಸಭೆ ವಿಪಕ್ಷ ಉಪನಾಯಕ ಹಾಗೂ ಹು-ಧಾ ಪಶ್ಚಿಮ ಕ್ಷೇತ್ರದ ಶಾಸಕ ಶ್ರೀ ಅರವಿಂದ ಬೆಲ್ಲದ(arvindbellad) ಟೀಕಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆಯೇ ಹೊರತು, ಯಾವುದೇ ಅರ್ಥಪೂರ್ಣ ಅಭಿವೃದ್ಧಿ(development) ಕಾರ್ಯಗಳು ನಡೆದಿಲ್ಲ. ರಾಜ್ಯದ ಮೂಲಸೌಕರ್ಯಗಳಾದ ರಸ್ತೆ, ನೀರಾವರಿ ಮತ್ತು ವಿದ್ಯುತ್ ಕ್ಷೇತ್ರಗಳು ಸಂಪೂರ್ಣ ನಿರ್ಲಕ್ಷ್ಯಕ್ಕೆ(negligence) ಒಳಗಾಗಿವೆ. ರಾಜ್ಯದ ಬೊಕ್ಕಸ ಬರಿದಾಗಿದೆ. ಸಾಲದ ಹೊರೆ ವಿಪರೀತವಾಗಿದ್ದು, ಮುಂದಿನ ಪೀಳಿಗೆಯ ಮೇಲೆ ಆರ್ಥಿಕ ಹೊರೆಯ ಭಾರವನ್ನು ಈ ಸರ್ಕಾರ ಹೇರಿದೆ. ಅಭಿವೃದ್ಧಿ ಕಾಮಗಾರಿಗಳಿಗೆ ಹಣ ಬಿಡುಗಡೆ(release) ಮಾಡಲು ಸರ್ಕಾರ ಪರದಾಡುತ್ತಿದೆ.

ರಾಜ್ಯದಲ್ಲಿ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ಜನಸಾಮಾನ್ಯರು, ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳು ಸುರಕ್ಷಿತವಾಗಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಆಡಳಿತ ಯಂತ್ರವು ಸಂಪೂರ್ಣ ನಿಷ್ಕ್ರಿಯವಾಗಿದೆ. ವರ್ಗಾವಣೆ ದಂಧೆ ಮತ್ತು ಕಾಮಗಾರಿಗಳಲ್ಲಿನ ಭ್ರಷ್ಟಾಚಾರ ಸಾರ್ವತ್ರಿಕವಾಗಿದೆ. ಸರ್ಕಾರದ ಸಚಿವರು ಮತ್ತು ಅಧಿಕಾರಿಗಳ ನಡುವೆ ಸಮನ್ವಯವಿಲ್ಲದ ಕಾರಣ, ಆಡಳಿತದಲ್ಲಿ ಪಾರದರ್ಶಕತೆ ಎಂಬುದು ಮರೀಚಿಕೆಯಾಗಿದೆ.

ಪ್ರಚಾರಕ್ಕಾಗಿ ಕೋಟ್ಯಂತರ ರೂಪಾಯಿ ತೆರಿಗೆ ಹಣ ಖರ್ಚು ಮಾಡಿ ಸಮಾವೇಶ ಆಯೋಜಿಸುತ್ತಿರುವುದು ಖಂಡನೀಯ. ಜನರಿಗೆ ನೀಡಿರುವ ಭರವಸೆಗಳನ್ನು ಈಡೇರಿಸುವ ಬದಲು, ಇಂತಹ ವೈಭವೋಪೇತ ಕಾರ್ಯಕ್ರಮಗಳ ಮೂಲಕ ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಟೀಕಿಸಿದ್ದಾರೆ.

contact for news and ads: 7618750299

Related Articles

Leave a Reply

Your email address will not be published. Required fields are marked *