BREAKING NEWSCITY CRIME NEWSHubballiKalghatagiKMC HOSPITALಸ್ಥಳೀಯ ಸುದ್ದಿಹುಬ್ಬಳ್ಳಿ

ಲಾರಿ-ಕಾರಿನ ನಡುವೆ ಭೀಕರ ರಸ್ತೆ ಅಪಘಾತ!

Accident

POWER CITYNEWS : HUBBALLI

ಹುಬ್ಬಳ್ಳಿ : ಇಂದು ಬೆಳಿಗ್ಗೆ ಲಾರಿ ಹಾಗೂ ಕಾರಿನ ನಡುವೆ ಮುಖಾ ಮುಖಿ ಡಿಕ್ಕಿ ಸಂಭವಿಸಿದ್ದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಐವರು ಗಂಭೀರವಾಗಿ ಗಾಯಗೊಂಡ ಘಟನೆ ಕಲಘಟಗಿ ಹಾಗೂ ಹುಬ್ಬಳ್ಳಿ ರಸ್ತೆಯ ವಿಲೇಜ್ ಧಾಬಾ ಎದುರು ನಡೆದಿದೆ.

ಯಲ್ಲಾಪುರದಿಂದ ಹುಬ್ಬಳ್ಳಿಯತ್ತ ಮುಖಮಾಡಿ ಹೊರಟಿದ್ದ ka30N2406 ಕಾರು ಹಾಗೂ ಹುಬ್ಬಳ್ಳಿಯಿಂದ ಕಲಘಟಗಿಯತ್ತ ಮುಖಮಾಡಿ ಹೊರಟಿದ್ದ GJ11 VV9961ನಂಬರಿನ ಲಾರಿ ವಿಲೇಜ್ ಧಾಬಾ ತಿರುವಿನಲ್ಲಿ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಕಾರು ಚಾಲಕನ ಸ್ಥಿತಿ ಚಿಂತಾಜನಕ ಎಂದು ಹೇಳಲಾಗಿದೆ. ಅಪಘಾತ ವೇಳೆ ಕಾರಿನಲ್ಲಿ ಐವರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.ಗಾಯಾಳುಗಳನ್ನು ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ.

ಅಪಘಾತವಾಗುತ್ತಿದ್ದಂತೆ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಅಪಘಾತದಿಂದಾಗಿ ಸಾರ್ವಜನಿಕ ಸಂಚಾರಿ ವಾಹನಗಳು ರಸ್ತೆಯುದ್ದಕ್ಕೂ ಸಾಲುಗಟ್ಟಿ ನಿಲ್ಲುವಂತಾಯಿತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಲಘಟಗಿ ಪೊಲಿಸರು ಕ್ರೇನ್ ಬಳಸಿ ಅಪಘಾತಪಟ್ಟ ವಾಹನಗಳನ್ನು ರಸ್ತೆ ಪಕ್ಕಕ್ಕೆ ಸರಿಸುವ ಮೂಲಕ ಸಂಚಾರಿ ವಾಹನಗಳಿಗೆ ಅನೂವು ಮಾಡಿಕೊಟ್ಟಿದ್ದಾರೆ.

ವರದಿ : ದೀಪಕ್

Related Articles

Leave a Reply

Your email address will not be published. Required fields are marked *

Back to top button