ರಾಹುಲ್ ಗಾಂಧಿ ಹಾಗೂ ಟಿಎಮಸಿ ಸಂಸದನ ವಿರುದ್ಧ ಬಿಜೆಪಿಯಿಂದ ಧಿಕ್ಕಾರ !
POWER CITYNEWS !

POWER CITYNEWS: HUBLI
ಹುಬ್ಬಳ್ಳಿ: ಕಾಂಗ್ರೆಸ್ ಹಾಗೂ ಟಿಎಂಸಿ ಸಂಸದರ ವಿರುದ್ಧ ಹುಬ್ಬಳ್ಳಿಯಲ್ಲಿ ಬಿಜೆಪಿ ಪ್ರೊಟೆಸ್ಟ್ ನಡೆಸಿತು. ಉಪರಾಷ್ಟ್ರಪತಿಗಳಿಗೆ ರಾಹುಲ್ ಗಾಂಧಿ ಹಾಗೂ ಟಿಎಂಸಿ ಸಂಸದ ಕಲ್ಯಾಣ ಅವರನ್ನು ಅಣುಕಿಸಿ ಅವಮಾನಿಸಿದ ನಡೆಯನ್ನು ಖಂಡಿಸಿ ನಗರದ ಸಂಗೊಳ್ಳಿರಾಯಣ್ಣ ವೃತದಲ್ಲಿ ಪ್ರತಿಭಟನೆ ನಡೆಸಿ ಬಿಜೆಪಿ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಹು-ಧಾ ಮಾಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಂಜಯ ನೇತೃತ್ವದಲ್ಲಿ ಪ್ರತಿಭಟನೆಯಲ್ಲಿ
ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಟಿಎಂಸಿ ಸಂಸದ ಕಲ್ಯಾಣ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಸಂಸದರ ಅಮಾನತು ನಡೆ ಖಂಡಿಸಿ ಇಂಡಿಯಾ ಒಕ್ಕೂಟದ ನಡೆಯುತ್ತಿದ್ದ ಪ್ರತಿಭಟನೆಯಲ್ಲಿ ಉಪರಾಷ್ಟ್ರಪತಿಗೆ ಅವಮಾನ ಮಾಡಲಾಗಿದೆ ಆರೋಪಿಸಿದರು.
ಟಿಎಂಸಿ ಸಂಸದ ಕಲ್ಯಾಣ ಉಪರಾಷ್ಟ್ರಪತಿ ಅಣುಕು ಪ್ರದರ್ಶಿಸಿ ವ್ಯಂಗ್ಯವಾಡಿದ್ದಾರೆ. ಇದಕ್ಕೆ ಬೆಂಬಲ ವೆಂಬಂತೆ ಅಣುಕು ಮಾಡುವುದನ್ನು ರಾಹುಲ್ ವಿಡಿಯೋ ಮಾಡುತ್ತಾ ಹಾಸ್ಯಾಸ್ಪದವಾಗಿ ನಡೆಸಿಕೊಂಡಿದ್ದಾರೆ ಆರೋಪಿಸಿದರು.

ಇದು ಇಂಡಿಯಾ ಒಕ್ಕೂಟದ ಮನಸ್ಥಿತಿ ತೋರಿಸುತ್ತದೆ. ಸಂಸತನಲ್ಲಿ ಉಪ ರಾಷ್ಟ್ರಪತಿಗಳು ಪಕ್ಷಾತೀತವಾಗಿ ಕಾರ್ಯ ನಿರ್ವಹಿಸುತ್ತಾರೆ.ಹಾಗಿದ್ದಾಗ್ಯೂ ಕಾಂಗ್ರೆಸ್, ಟಿಎಮ್’ಸಿ ನಾಯಕರು ಉಪರಾಷ್ಟ್ರಪತಿಗಳಿಗೆ ಅವಮಾನ ಮಾಡಿದ್ದಾರೆ.
ಈ ಕೂಡಲೇ ಕಾಂಗ್ರೆಸ್‌ನ ರಾಹುಲ್ ಗಾಂಧಿ ಹಾಗೂ ಸಂಸದ ಕಾಲ್ಯಾಣರನ್ನು ಅಮಾನತು ಮಾಡಲು ಅಗ್ರಹಿಸಿದ್ದಾರೆ.
