ಪುಟ್ಟ ಕಂದಮ್ಮನ ಸಾವು:ಅನುಮಾನ ವ್ಯಕ್ತಪಡಿಸಿದ ಕುಟುಂಬಸ್ಥರು!
Child death!

POWERCITY NEWS : HUBBALLI
ಹುಬ್ಬಳ್ಳಿ: ಬೆಳವಣಿಗೆ ಮತ್ತು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ನಿಟ್ಟಿನಲ್ಲಿ ಮಕ್ಕಳಿಗೆ ನೀಡುವ ಲಸಿಕೆ ಎಫೆಕ್ಟ್ ನಿಂದ ಎರಡುವರೆ ವರ್ಷದ ಗಂಡು ಮಗು ಸಾವನ್ನಪ್ಪಿದ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.
ಹುಬ್ಬಳ್ಳಿಯ ಉಣಕಲ್ ಗ್ರಾಮ ಮೂಲದ ದಂಪತಿಗಳಾದ ಶರಣಬಸಪ್ಪ ಹಾಗೂ ಶಿಲ್ಪಾ ಅವರಿಗೆ ಜನಿಸಿದ ಗಂಡು ಮಗು ಇದಾಗಿದೆ. ಎರಡುವರೆ ವರ್ಷದ ಗಂಡು ಮಗು ಧೃವ ಎಂಬ ಪುಟ್ಟ ಕಂದಮ್ಮ ಅಜ್ಜ ಜಟ್ಟೆಪ್ಪ ಮತ್ತು ಅಜ್ಜಿ ಮಲ್ಲಮ್ಮನ ಜೊತೆಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದ ಇ ಕಂದಮ್ಮ.

ಆದರೆ ಸಮೀಪದ ಅಂಗನ ವಾಡಿಯಲ್ಲಿ ಮಗುವಿನ ಆರೋಗ್ಯ ಬೆಳವಣಿಗೆ ದೃಷ್ಟಿಯಿಂದ ನಿನ್ನೆ ಒಂದೇ ದಿನದಲ್ಲಿ ಐದು ಲಸಿಕೆ ಹಾಕಿದ್ದಾರೆ ಎನ್ನಲಾಗುವ ಅಂಗನವಾಡಿ ಕೇಂದ್ರದ ಸಿಬ್ಬಂದಿಗಳು ವಿರುದ್ಧ ಇದೀಗ ಗಂಭೀರ ಆರೋಪ ಕೇಳಿಬಂದಿದೆ.
ಲಸಿಕೆ ಓವರ್ ಡೋಸ್ ನಿಂದಾಗಿ ಮಗು ಸಾವನ್ನಪ್ಪಿದ ಶಂಕೆ ವ್ಯಕ್ತವಾಗುತ್ತಿದ್ದು. ನಿನ್ನೆ ಮಧ್ಯಾಹ್ನ ಸಮೀಪದ ಅಂಗನವಾಡಿಯಲ್ಲಿ ಮಗುವಿಗೆ ಲಸಿಕೆ ಹಾಕಿಸಲಾಗಿತ್ತು ಎನ್ನಲಾಗಿದೆ. ಆದರೆ ಲಸಿಕೆ ಹಾಕಿಸಿದ ನಂತರದಲ್ಲಿ ತೀವ್ರ ಜ್ವರ ಹಾಗೂ ಹೊಟ್ಟೆ ನೊವಿನಿಂದ ಬಳಲುತ್ತಿದ್ದ ಮಗುವನ್ನು.ಕೂಡಲೇ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗೆಂದು ದಾಖಲಾಗುತ್ತಿದ್ದಂತೆಯೇ ಮಗು ಧೃವ ಸಾವನ್ನಪ್ಪಿದ್ದಾನೆ.

ಇದೀಗ ಮಗುವಿನ ಸಾವಿಗೆ ಅಂಗನವಾಡಿ ಕಾರ್ಯಕರ್ತೆಯರೆ ನೇರ ಕಾರಣವೆಂದು ಮಗುವಿನ ಪೋಷಕರ ಆರೋಪ ಮಾಡುತ್ತಿದ್ದು,ಕಿಮ್ಸ್ ಆವರಣದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿತ್ತು.
ಹಾಗಾದರೆ ಮಗುವಿನ ಸಾವಿಗೆ ನಿಜವಾದ ಕಾರಣ ಎನು ಎನ್ನುವುದರ ಬಗ್ಗೆ ಮಗುವಿನ ಮರಣೋತ್ತರ ಪರೀಕ್ಷೆಯ ಬಳಿಕವೆ ತಿಳಿಯಲಿದೆ.
