assemblyBREAKING NEWSCITY CRIME NEWSDHARWADHubballiL&TLife StyleTechTWINCITY

ಧಾರವಾಡ”ಭೀಮೋತ್ಸವ”2025ಕ್ಕೆ ಬಲ ನೀಡಿದ ಕರವೆ ಪ್ರವಿಣ್ ಶೆಟ್ಟಿ ಬಣ!

POWER CITY

POWER CITY NEWS /DHARWADಧಾರವಾಡ: ಸಂವಿಧಾನಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವದ ಅಂಗವಾಗಿ ಕರ್ನಾಟಕ ರಾಜ್ಯ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಧಾರವಾಡ ಘಟಕ ದಿಂದ ಇದೆ 27ರ ಭಾನುವಾರ “ಭೀಮೋತ್ಸವ”2025 ಹಮ್ಮಿಕೊಳ್ಳಲಾಗಿದೆ.

ಧಾರವಾಡದ ಕಲಾಭವನ ಮೈದಾನದಲ್ಲಿ ನಡೆಯುತ್ತಿರುವ “ಭೀಮೋತ್ಸವ”2025 ರ ಕಾರ್ಯಕ್ರಮಕ್ಕೆ ಬಾಹ್ಯ ಬೆಂಬಲ ನೀಡಿರುವ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಬೆಳಗಾವಿ ವಿಭಾಗದ ಅದ್ಯಕ್ಷರಾದ ಪಾಪುಧಾರೆ ಮಾತನಾಡಿ ಧಾರವಾಢ ಜನಪದ ಲೋಕಕ್ಕೆ ಹಲವು ಕೊಡುಗೆಗಳನ್ನು ನೀಡಿರುವ ಶಾಂತತೆಯ ಬೀಡು ಧಾರವಾಡದಲ್ಲಿ ಇದೆ 27ರಂದು ಜರುಗುವ ಜರುಗಲಿರುವ “ಭೀಮೋತ್ಸವ”2025ರ ಕಾರ್ಯಕ್ರಮವು ಅತ್ಯಂತ ವಿಶೇಷ ಹಾಗೂ ವಿಜೃಂಭಣೆಯಿಂದ ಕೂಡಿರಲಿದ್ದು ಕಾರ್ಯಕ್ರಮದಲ್ಲಿ ಜನಸಾಗರವೆ ಹರಿದು ಬರಲಿದೆ ಅಲ್ಲದೆ.ಇದೇ ದಿನ ಮಧ್ಯಾಹ್ನ 2 ಗಂಟೆಗೆ ಡಾ. ಬಿ ಆರ್ ಅಂಬೇಡ್ಕರ್ ಅವರ ಸ್ತಬ್ದ ಚಿತ್ರದ ಜನಪರ ವಾಹಿನಿಯ ಭವ್ಯ ಮೆರವಣಿಗೆಯಲ್ಲಿಯೂ ಸಹ ನೂರಾರು ಕರವೇ ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ.

ಇದೆ ಮೊದಲ ಬಾರಿಗೆ ಒಂದು ಕನ್ನಡ ಪರ ಸಂಘಟನೆ ಮತ್ತೊಂದು ಸಾಮಾಜಿಕ ಜವಾಬ್ದಾರಿಯನ್ನ ಹೊತ್ತಂತಹ ಸಂಘಟನೆಗೆ ಪ್ರೋತ್ಸಾಹಿಸುವ ಮೂಲಕ ಒಗ್ಗಟ್ಟಿನ ಹೆಗ್ಗುರುತಾಗಿ ಕಂಡು ಬರುತ್ತದೆ ಎಂದರು.

Related Articles

Leave a Reply

Your email address will not be published. Required fields are marked *