ಧಾರವಾಡ

ತುಪ್ಪರಿಹಳ್ಳ ಸರ್ವೇ ಆಗದಿದ್ದರೆ ಪಾದಯಾತ್ರೆ ಮಾಡುವೆ- ಬಸವರಾಜ ಕೊರವರ

ಧಾರವಾಡ

ಪ್ರಸಕ್ತ ಬಜೆಟ್ ನಲ್ಲಿ ಧಾರವಾಡ ಜಿಲ್ಲೆಯ ತುಪ್ಪರಿ ಹಳ್ಳಕ್ಕೆ ಅನುದಾನ ಮೀಸಲಿಡದಿದ್ದರೆ ತುಪರಿಹಳ್ಳದ
ವ್ಯಾಪ್ತಿ ಹಳ್ಳಿಗಳಲ್ಲಿ ಬೃಹತ್ ಪಾದಯಾತ್ರೆ ನಡೆಸಲಾಗುವುದು ಎಂದು ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ ಎಚ್ಚರಿಕೆ ಕೊಟ್ಟಿದ್ದಾರೆ.

ತುಪ್ಪರಿಹಳ್ಳ ಧಾರವಾಡ ಜಿಲ್ಲೆಯ ಜೀವನಾಡಿ. ಈ ಯೋಜನೆಯ ಕುರಿತು ಈವರೆಗೆ ಕೇವಲ ದೊಡ್ಡ ದೊಡ್ಡ ಭಾಷಣಗಳಾಗಿವೆ ಹೊರತು ವೈಜ್ಞಾನಿಕ ಸರ್ವೇ ನಡೆಸದಿರುವುದು ತುಂಬಾ ವಿಷಾದನೀಯ ಸಂಗತಿ ಎಂದು ಜನಜಾಗೃತಿ ಸಂಘದ ಅಧ್ಯಕ್ಷರಾದ ಬಸವರಾಜ ಹೆಚ್ ಕೊರವರ ಆರೋಪಿಸಿದರು.

ಅವರು ಸೋಮವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,
ತುಪರಿ ಹಳ್ಳ ಉಳಿಸಿಕೊಂಡು ಮುಂದಿನ ಪಿಳಿಗೆಗೆ ಅದನ್ನು ಸದುಪಯೋಗವಾಗುವ ರೀತಿಯಲ್ಲಿ ತೆಗೆದುಕೊಂಡು ಹೋಗುವ ಜವಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಹೇಳಿದರು.

ಧಾರವಾಡ ತಾಲೂಕಿನ ಮೇಲಗಡೆಯಿಂದ ಬಂದು ನವಲಗುಂದ ತಾಲೂಕಿನ ಕೆಳಗಡೆ ವರೆಗೆ ಯೋಜನೆಯನ್ನು ಅನುಷ್ಠಾನಗೊಳಿಸಿದ್ದಲ್ಲಿ ಸುಮಾರು 12.24 TMC ನೀರನ್ನು ತಡೆಗಟ್ಟಿ ಪ್ರವಾಹದಿಂದ ಆಗುವ ಅನಾಹುತಗಳಿಗೆ ಶಾಶ್ವತ ಪರಿಹಾರವನ್ನು ಕಂಡುಕೊಳ್ಳಬಹುದಾಗಿದೆ.
ಸುಮಾರು 56 ಉಪಹಳ್ಳಗಳ ಪೈಕಿ 40 ಉಪಹಳ್ಳಗಳು ಧಾರವಾಡ ತಾಲೂಕಿನಲ್ಲಿ ತುಪ್ಪರಿಹಳ್ಳಕ್ಕೆ ಸೇರುತ್ತಿದ್ದು ಅವುಗಳನ್ನೂ ಕೂಡ ಅಭಿವೃದ್ದಿ ಪಡಿಸಬಹುದಾಗಿದೆ.

MI ಅಧಿಕಾರಿಗಳಿಂದ ಸರ್ವೆ ಇಲಾಖೆಗೆ ಪತ್ರ ಬರೆದು ಸರ್ವೆ ಮಾಡಿ ವರದಿ ಸಲ್ಲಿಸಲು ಕೇಳಿಕೊಂಡಿರುತ್ತಾರೆ.
ಆದರೆ ಸರ್ವೆ ಇಲಾಖೆಯವರು ನಮ್ಮಲ್ಲಿ ಸಿಬ್ಬಂಧಿ ಹಾಗೂ ಅನುದಾನದ ಕೊರತೆ ಇರುವದಾಗಿ ಹಾಗೂ ಅನುದಾನವನ್ನು ನೀಡಿದಲ್ಲಿ ಹೊರಗುತ್ತಿಗೆ ಸಿಬ್ಬಂಧಿಗಳಿಂದ ಸರ್ವೆ ಮಾಡಿಸಿ ವರದಿ ಸಲ್ಲಿಸುವದಾಗಿ ತಿಳಿಸಿರುತ್ತಾರೆ.

ಹೀಗಾಗಿ ರಾಜ್ಯ ಸರ್ಕಾರಕ್ಕೆ ಈ ಮೂಲಕ ಮನವಿ ಮಾಡಿಕೊಳ್ಳುವದೇನೆಂದರೆ ಧಾರವಾಡದಲ್ಲಿ ಪ್ರತಿಷ್ಟಿತ ಕರ್ನಾಟಕ ವಿಶ್ವವಿದ್ಯಾಲಯ, ಪಕ್ಕದ ಜಿಲ್ಲೆಯಾದ ಗದಗನಲ್ಲಿ ಗ್ರಾಮೀಣಾಭಿವೃದ್ದಿ ವಿಶ್ವವಿದ್ಯಾಲಯ ಹಾಗೂ ರಾಷ್ಟ್ರದ ಪ್ರತಿಷ್ಟಿತ IIT ಹಾಗೂ IIIT ಗಳಿದ್ದು. ಅವುಗಳ ಸದುಪಯೋಗ ಪಡೆದುಕೊಂಡು ವೈಜ್ಞಾನಿಕವಾಗಿ ಸರ್ವೆ ಕಾರ್ಯವನ್ನು ಕೈಕೊಂಡು ಪ್ರಸಕ್ತ ಬಜೆಟ್ ನಲ್ಲಿ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಬೇಕು.

ಇಲ್ಲದಿದ್ದರೆ ತುಪರಿಹಳ್ಳದ
ವ್ಯಾಪ್ತಿ ಹಳ್ಳಿಗಳಲ್ಲಿ ಆ ಭಾಗದ ರೈತರು, ಯುವ ಸಮೂಹವನ್ನು ತೆಗೆದುಕೊಂಡು ತುಪರಿ ಹಳ್ಳದಗುಂಟ
ಬೃಹತ್ ಪಾದಯಾತ್ರೆ ನಡೆಸುವುದು, ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳುವುದು ಅನಿವಾರ್ಯ ವಾಗಲಿದೆ ಎಂದು ಬಸವರಾಜ ಕೊರವರ ಎಚ್ಚರಿಸಿದರು‌.

2000ದಲ್ಲಿಯೇ ನೀರಾವರಿ ತಜ್ಞ
ಪರಮಶಿವಯ್ಯ ಅವರ ವರದಿಯಲ್ಲಿ ತುಪರಿಹಳ್ಳ ಹಾಗೂ ಬೆಣ್ಣೆ ಹಳ್ಳದಿಂದ ಹರಿದು ಬರುವ ನೀರು, ಅದನ್ನು ಸದುಪಯೋಗ ಪಡಿಸಿಕೊಳ್ಳಲು ಯಾವ ರೀತಿ ಯೋಜನೆ ರೂಪಿಸಬೇಕು ಎಂಬುದರ ಕುರಿತು ಮಾಹಿತಿ ನೀಡಲಾಗಿದೆ. ಆದರೆ ಈವರೆಗೆ ಅದರ ಬಗ್ಗೆ ಜಿಲ್ಲೆಯ ಯಾವೊಬ್ಬ ಪ್ರತಿನಿಧಿಗಳು ಕಿಂಚಿತ್ತೂ ಗಮನಹರಿಸದಿರುವುದು ನೋವಿನ ಸಂಗತಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ತುಪರಿ ಹಳ್ಳದ ವಿವರ :
ಈ ತುಪರಿ ಹಳ್ಳ ಕಿತ್ತೂರ ಹತ್ತಿರ ಬೈಲಹೊಂಗಲ ತಾಲೂಕಿನ ಓರಾದಿಯಿಂದ ಧಾರವಾಡ ತಾಲೂಕಿಗೆ ಪ್ರವೇಶಿಸಿ ತೇಗೂರ,ಹಳೆತೇಗೂರ ಹಂಗರಕಿ ಲೋಕೂರ ಪುಡಕಲಕಟ್ಟಿ ಉಪ್ಪಿನಬೆಟಗೇರಿ ಅಮ್ಮಿನಭಾವಿ ಹಾರೋಬೆಳವಡಿ ಮಾರ್ಗವಾಗಿ ನವಲಗುಂದ ತಾಲೂಕಿನ ಮೂಲಕ ಬೆಣ್ಣಿಹಳ್ಳಕ್ಕೆ ಸೇರಿ ನಂತರ ಮಲಪ್ರಭೆಗೆ ಸೇರುತ್ತದೆ.
0 ದಿಂದ 20 ಮೀಟರ ಎತ್ತರದಿಂದ ಹರಿದು ಬರುವ ನೀರು UP Stream ತೇಗೂರ ದಿಂದ ಅಮ್ಮಿನಭಾವಿವರೆಗೆ ಹರಿದು ಬರುವ ನೀರು ಶೇ.95 ರಷ್ಟು ನೀರನ್ನು ಕುಡಿಯುವ ನೀರು ಹಾಗೂ ವ್ಯವಸಾಯಕ್ಕೆ ಉಪಯೋಗಿಸಲು ಯೋಗ್ಯವಾಗಿರುತ್ತದೆ.

ಮುಂದೆ ಅಂದರೆ ಅಮ್ಮಿನಬಾವಿ ಹದ್ದಿನಿಂದ ಹಾರೋಬೆಳವಡಿ ಹದ್ದಿನ ವರೆಗೆ ಹರಿದು ಬರುವ ನೀರು ಶೇ.85 ರಷ್ಟು ಕುಡಿಯಲು ಹಾಗೂ ವ್ಯವಸಾಯಕ್ಕೆ ಉಪಯೋಗಿಸಲು ಯೋಗ್ಯವಾಗಿರುತ್ತದೆ.
ಪ್ರತಿಶತ ಶೇಕಡಾ ಮಳೆ ಪ್ರಮಾಣಕ್ಕೆ ಹೋಲಿಸಿದಾಗ ಮಳೆ ಪ್ರಮಾಣವು ಶೇ.60 ರಿಂದ 70 ಆದಲ್ಲಿ ಜುಲೈ ಹಾಗೂ ಅಗಷ್ಟ ತಿಂಗಳ ಮಳೆಯ ಪ್ರಮಾಣವನ್ನು ಪರಿಗಣಿಸಿ ನೀರನ್ನು ಸಂರಕ್ಷಿಸಿದಲ್ಲಿ ಸುಮಾರು 3.4 TMC ಯಷ್ಟು ನೀರನ್ನು ಸಮುದ್ರಕ್ಕೆ ಸೇರುವದನ್ನು ತಡೆಗಟ್ಟಬಹದಾಗಿದೆ.
ಪ್ರಾಥಮಿಕ ಸರ್ವೆ ಪ್ರಕಾರ ಕ್ಯಾಚಮೆಂಟ ಏರಿಯಾ ತೆಗೆದುಕೊಂಡಲ್ಲಿ ಹನುಮನಾಳ ಹಾಗೂ ಕಲ್ಲೆ ಕಬ್ಬೂರ ಭಾಗದಲ್ಲಿ ಸುಮಾರ 1207ಹೆಕ್ಟೇರ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ ಅವಕಾಶ ದೊರೆಯುತ್ತದೆ.

ಒಟ್ಟಾರೆಯಾಗಿ ಈ ಯೋಜನೆಯನ್ನು ಅನುಷ್ಠಾನಗೊಳಿಸಿದಲ್ಲಿ ಧಾರವಾಡ ತಾಲೂಕಿನ Upper Stream Valley ನಿಂದ ಧಾರವಾಡ ತಾಲೂಕಿನ ಅಂತ್ಯದ ವರೆಗೆ Down Stream Valley ವರೆಗೆ ಸುಮಾರು 30 ಮೀಟರ ಅಗಲ ಹಾಗೂ ಅಂದಾಜು 32 ಕಿ.ಮೀ ತುಪ್ಪರೀಹಳ್ಳವನ್ನು ತಾಂತ್ರಿಕವಾಗಿ ಅಭಿವೃದ್ದಿ ಪಡಿಸಿ ಚೆಕ್ ಡ್ಯಾಮಗಳನ್ನು ನಿರ್ಮಾಣ ಮಾಡಿ ನೀರನ್ನು ಸಂರಕ್ಷಣೆ ಮಾಡಿದ್ದಲ್ಲಿ ಸುಮಾರು 10383 ಹೆಕ್ಟೇರ ಸುಮಾರ 25000 ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಒದಗಿಸಬಹುದಾಗಿದೆ.

ಧಾರವಾಡ ತಾಲೂಕಿನ ಸರಾಸರಿ ಬೋರ ವೆಲ್ ಡ್ರಿಲ್ಲಿಂಗ ಕನಿಷ್ಟ 400 ಫೂಟ ಗರಿಷ್ಟ 900 ಫೂಟ ವರೆಗೆ ಸದ್ಯ ನೀರಿನ ಲಭ್ಯತೆ ಇರುತ್ತದೆ.
ಈ ಯೋಜನೆಯನ್ನು ಅನುಷ್ಠಾನಗೊಳಿಸಿದಲ್ಲಿ ಸರಾಸರಿ ಪ್ರಮಾಣವನ್ನು ಕನಿಷ್ಟ 120 ಫೂಟ ಗರಿಷ್ಟ 500 ಮೀಟರ ವರೆಗೆ ಇಳಿಯುತ್ತದೆ.

ಪತ್ರಿಕಾಗೋಷ್ಠಿಯಲ್ಲಿ ಜನಜಾಗೃತಿ ಸಂಘದ ಉಪಾಧ್ಯಕ್ಷ ನಾಗರಾಜ ಕಿರಣಗಿ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಕೊಟಬಾಗಿ ರೈತ ಮುಖಂಡರಾದ ಸಂತೋಷ ಕುರಕುರಿ, ಆನಂದ ಪಾಟೀಲ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button