POWER CITYNEWS: HUBLI
ಹುಬ್ಬಳ್ಳಿ:ಕೆಲವೇ ದಿನಗಳ ಹಿಂದೆ ನಡೆದ ನೇಹಾ ಹಿರೇಮಠ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಮತ್ತೋರ್ವ ಹಿಂದೂ ಯುವತಿಯ ಬರ್ಬರ ಹತ್ಯೆ ನಡೆದ ಘಟನೆ ಇಂದು ಬೆಳಗಿನ ಜಾವ ವೀರಾಪೂರ ಓಣಿಯಲ್ಲಿ ನಡೆದಿದೆ.
ಸದಾ ಜನಜಂಗುಳಿಯಿಂದ ಕೂಡಿರುತ್ತಿದ್ದ ವೀರಾಪುರ ಓಣಿ ಸಮೀಪದ ಗುಡಿಓಣಿಯ ನಿವಾಸಿ ಅಂಜಲಿ ಅಂಬಿಗೇರ ಎಂಬ ಯುವತಿಯ ಮನೆಗೆ ಬೆಳಗಿನ ಜಾವ ಬಂದಿದ್ದ ಎನ್ನಲಾದ ವಿಶ್ವಾನಾಥ ಮನೆ ಬಾಗಿಲು ಬಡಿದಿದ್ದಾನೆ.
ನಿದ್ರೆ ಮಂಪರಿನಲ್ಲಿದ್ದ ಯುವತಿ ಅಂಜಲಿ ಬಾಗಿಲು ತೆಗೆದದ್ದೆ ತಡ ಒಳ ನುಗ್ಗಿದ ವಿಶ್ವನಾಥ್ ಪ್ರೀತಿಸುವಂತೆ ಒತ್ತಾಯಿಸಿದ್ದಾನೆ.
ಆದರೆ ಪ್ರೀತಿ ನಿರಾಕರಿಸಿದ ಆಕೆಯನ್ನು ಕ್ಷಣಾರ್ಧದಲ್ಲಿ ತನ್ನ ಬಳಿ ಇದ್ದ ಹರಿತವಾದ ಆಯುಧದಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.
ಹಲವು ಅಪರಾಧ ಹಿನ್ನೆಲೆಯುಳ್ಳ ವಿಶ್ವನಾಥ ಸಾವಂತ ಅಲಿಯಾಸ್ ಗಿರೀಶ್ ಸಾವಂತಗೌಡರ ಕಳೆದ ಹಲವಾರು ದಿನಗಳಿಂದ ತಂದೆ ತಂದೆ ತಾಯಿ ಇಲ್ಲದೆ ತನ್ನ ಅಜ್ಜಿ ಮನೆಯಲ್ಲಿದ್ದ ಅಂಜಲಿಗೆ ಒತ್ತಾಯ ಪೂರ್ವಕವಾಗಿ I love u ಎಂದು ಪೀಡಿಸುತ್ತಿದ್ದನಂತೆ, ಆದರೆ ಅಂಜಲಿ ಯಾವುದೇ ಮುಲಾಜಿಲ್ಲದೆ ಆತನ ಬೇಡಿಕೆಯ ಪ್ರೀತಿ ನಿರಾಕರಿಸಿದ್ದಾಳೆ. ಇದೆ ಕೋಪಕ್ಕೆ ಬೆಳಂಬೆಳ್ಳಗ್ಗೆ ಗುಡಿಓಣಿಯಲ್ಲಿನ ಅಂಜಲಿ ನಿವಾಸಕ್ಕೆ ತೆರಳಿ ಮನೆಯ ಕದ ಬಡಿದು ಅಂಜಲಿಯ ಹೊಟ್ಟೆಗೆ ಚಾಕು ಇರಿದಿದ್ದಾನೆ ಇದರಿಂದ ಸ್ಥಳದಲ್ಲೇ ಆಕೆಯ ಸಾವು ಸಂಭವಿಸಿದೆ ಎನ್ನಲಾಗಿದೆ.
ಸದ್ಯ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಪೋಲಿಸರು ಕಾನೂನು ಕ್ರಮಜರುಗಿಸಿದ್ದಾರೆ. ಪರಿಶೀಲನೆ ನಡೆಸಿದ್ದಾರೆ.
ಇತ್ತಿಚೀನ ದಿನಗಳಲ್ಲಿ ಅಮಾಯಕ ಯುವತಿಯರ ಮೇಲೆ ರಾಜಾರೋಷವಾಗಿ ದಾಳಿ ನಡೆಸುತ್ತಿರುವ ರಕ್ಕಸ ಮನೊವೃತ್ತಿಯ ಯುವಕರನ್ನ ಚಿಗುರುವ ಮುನ್ನವೇ ಹೊಸಕ ಬೇಕಿದೆ. ಇಲ್ಲವಾದಲ್ಲಿ ಸಮಾಜದಲ್ಲಿ ಹೆಣ್ಣುಹೆತ್ತವರ ಮನದಲ್ಲಿ ಆರಕ್ಷಕರು, ಕಾನೂನು ಇದೆ ಎಂಬುದನ್ನು ಕೂಡ ಮರೆತು ಭಯದ ಗೂಡು ಮನೆಮಾಡುತ್ತದೆ. ಕೂಡಲೇ ತಪ್ಪಿತಸ್ಥನ ವಿರುದ್ಧ ಕ್ರಮ ಜರುಗಿಸದಿದ್ದರೆ ಕಾನೂನು ಸುವೆವಸ್ಥೆಯನ್ನೇ ಪ್ರಶ್ನೆ ಮಾಡುವ ಸಮಯ ದೂರ ಉಳಿದಿಲ್ಲ ಎನ್ನುತ್ತೆ ಪ್ರಜ್ಙಾವಂತ ನಾಗರಿಕ ಸಮೂಹ.