BREAKING NEWSDHARWADTWINCITY

ರಜತ್ ಅಂತರಾಳಕ್ಕೆ ಕಾಂಗ್ರೆಸ್ ತಳಮಳ!

Rajat ullagaddi

POWER CITYNEWS : HUBALI

ಹುಬ್ಬಳ್ಳಿ:
ಟಿಕೆಟ್ ಸಿಗದೆ ಇರೋದಕ್ಕೆ ಲಕ್ಷ್ಮೀ ಹೆಬ್ಬಾಳಕರ್ ಅಳಿಯ ಅಸಮಾಧಾನ..

ಲೋಕಸಭಾ ಚುನಾವಣಾ ಟಿಕೇಟ್ ಆಕಾಂಕ್ಷಿಯಾಗಿದ್ದ ಹುಬ್ಬಳ್ಳಿಯ ವಿದ್ಯಾನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅಳಿಯ ರಜತ್ ಉಳ್ಳಾಗಡ್ಡಿ ಇಂದು ಕಾಂಗ್ರೆಸ್ ಕಾರ್ಯಕರ್ತರನ್ನೊಳಗೊಂಡಂತೆ ಸಮಾನ ಮನಸ್ಕರರ ಸಭೆ ನಡೆಸಿದರು.

ಗೊಕುಲ ರಸ್ತೆಯ ಖಾಸಗಿ ಹೋಟೆಲ್ ನಲ್ಲಿ ಸಭೆ ನಡೆದ
ಸಭೆಯಲ್ಲಿ ಜಿಲ್ಲಾ ಪಟಕದ ಜಿಲ್ಲಾಧ್ಯಕ್ಷ ಅಲ್ತಾಪ್ ಹಳ್ಳೂರು ಹಾಗೂ ಸ್ಥಳಿಯ ಪಾಲಿಕೆ ಸದಸ್ಯರು,ಕಾಂಗ್ರೆಸ್ ಕಾರ್ಯಕರ್ತರು ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ಕಾಂಗ್ರೆಸ್ ಯುವ ಮುಖಂಡ ರಜತ್ ಉಳ್ಳಾಗಡ್ಡಿ ನಾನು ಕಳೆದ ಎಂಟ್ಹತ್ತು ತಿಂಗಳಿಂದ ಪಕ್ಷ ಬಲವರ್ಧನೆಗೆ ಸಾಕಷ್ಟು ಶ್ರಮಿಸಿ ಸಂಘಟನೆ ಮಾಡಿದ್ದೆನೆ. ವಿದ್ಯುನ್ಮಾನ ಪರ ಎಲ್ಲ ಸರ್ವೆ ಯಲ್ಲೂ ನನ್ನದೆ ಹೆಸರು ಮುನ್ನಡೆಯಲ್ಲಿತ್ತು. ಟಿಕೇಟ್ ಸಿಗುಬಹುದಾದ ಎಲ್ಲ ಅರ್ಹತೆಗಳು ನನಗಿತ್ತು.
ಆದ್ರೆ ಇದೀಗ ನನ್ನ ಪರವಾಗಿ ನನಗೆ ದೊರಕ ಬೇಕಿದ್ದ ಟಿಕೆಟ್‌ನ್ನು ಪಕ್ಷ ಬೇರೆಯವರಿಗೆ ನೀಡಿ ಘೋಷಣೆ ಮಾಡಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅಧಿಕೃತ ಅಭ್ಯರ್ಥಿಯಾಗಿ ಹೊರಹೊಮ್ಮ ಬೇಕಿದ್ದ ನನ್ನ ಮೇಲೆ ಅಂದು ಕೂಡ ಆತ್ಮ ಪರೀಕ್ಷೆ ನಡೆಯಿತು ಇದರಿಂದ ನನಗೆ ಟಿಕೆಟ್ ತಪ್ಪಿತ್ತು. ಇತ್ತೀಚಿನ ಚುನಾವಣೆಗಳಲ್ಲಿ ನಾನು ಪರೀಕ್ಷೆ ಬರೆದ್ರು ಆನ್ಸರ್ ಸೀಟ್ ಕಸಿದುಕೊಂಡು ಹೋದ್ರು.
ಅದ್ಯಾರ ಒಲವಿಗೆ ನನ್ನ ಟಿಕೆಟ್‌ಗಾಗಿ ಕೀಳುಮಟ್ಟದ ರಾಜಕೀಯ ನಡೆಸಿದ್ರೋ ಗೊತ್ತಿಲ್ಲ. ಆದ್ರೆ ವೀಕ್ ಕ್ಯಾಂಡಿಯೇಟ್ ಗೆ ಟೀಕೆಟ್ ಕೊಟ್ರು. ಆದ್ರೆ ಅವರು ಹತ್ತು ಮಾರ್ಕ್ಸ್ ಸಹ ತಗೋಲಿಲ್ಲ ಎಂದು ರಜತ್ ಉಳ್ಳಾಗಡ್ಡಿ
ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ವಿರುದ್ದ ಅಸಮಾಧಾನ ಹೊರಹಾಕಿದರು.

ಒಂದು ವೇಳೆ ಇದೀಗಷ್ಟೆ ಲೋಕಸಭಾ ಟಿಕೆಟ್ ದಕ್ಕಿಸಿಕೊಂಡಿರುವ ಅಸೂಟಿ ಪರ ಬೆಂಬಲ ನೀಡದಿದ್ದರೆ ಕಾಂಗ್ರೆಸ್ ಪಕ್ಷಕ್ಕೆ ಇನ್ನಿಲ್ಲ ಹಾನಿ ಕಟ್ಟಿಟ್ಟ ಬುತ್ತಿ.

ಇನ್ನೂ ಈ ಬಾರಿ ಎಂಟ್ರನ್ಸ್ ಎಕ್ಸಾಂ ಫೇಲ್ ಆಗಿದ್ದೇನೆ.
ಯೋಗ್ಯತೆ ಇದ್ರೂ ಯೋಗ ಇಲ್ಲ ಎಂದು ಅಸಮಾಧಾನ ಹೊರಹಾಕಿದ ರಜತ್ ತೀವ್ರ ಬೆಸರ ವ್ಯಕ್ತಪಡಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button