ರಾಜ್ಯಸ್ಥಳೀಯ ಸುದ್ದಿಹುಬ್ಬಳ್ಳಿ

ಕಮಲವ್ವನ ಮನೆ ಬಿದ್ದರೂ ಡೊಂಟ್ ಕೇರ್:ಮುಕ್ಕಲ್!

ಹುಬ್ಬಳ್ಳಿ:ಕಲಘಟಗಿ

ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಜಿಟಿ-ಜಿಟಿ ಮಳೆಯಿಂದಾಗಿ ಧಾರವಾಡ ಜಿಲ್ಲೆಯ ಹಲವೆಡೆ ಮನೆಕುಸಿತ ಸಾರ್ವಜನಿಕ ಆಸ್ತಿ-ಪಾಸ್ತಿ ಹಾನಿ ಯಾಗಿದ್ದು ಹಲವೆಡೆ ಮನೆಗಳು ನೆಲ ಕಚ್ಚಿದ ವರದಿಗಳು ಪ್ರಸಾರ ವಾಗುತ್ತಲೆ ಇವೆ.

ಮುರಿದುಬಿದ್ದ ಮನೆ

ಹೀಗೆಯೆ ಕಲಘಟಗಿಯ ಮುಕ್ಕಲ್ ಗ್ರಾಮದಲ್ಲಿ ಮನೆಯೊಂದು ಸತತ ಮಳೆಯಿಂದಾಗಿ ಕುಸಿದು ಬಿದ್ದುದರ ಪರಿಣಾಮ ಮನೆಯಲ್ಲಿದ್ದ ಕಮಲವ್ವ ಗದಗಿನ (60) ಎಂಬ ವೃದ್ಧೆಗೆ ಸಣ್ಣಪುಟ್ಟ ಗಾಯ ಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಆದರೆ ತಡರಾತ್ರಿ‌ ಮನೆ ಬಿದ್ದರು ಗ್ರಾಮಪಂಚಾಯ್ತಿ ಸದಸ್ಯರಾಗಲಿ ಅಥವಾ ಸಂಭಂದಪಟ್ಟ ಅಧಿಕಾರಿಗಳಾಗಲಿ ಇದುವರೆಗೂ ಘಟನಾ ಸ್ಥಳಕ್ಕೆ ಭೇಟಿ ನೀಡಿಲ್ಲ. ಎಂದು ಮುಕ್ಕಲ್ ಗ್ರಾಮದ ನಿವಾಸಿಗಳು ಬೆಸರ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಇನ್ನಾದರೂ ಘಟನಾ ಸ್ಥಳಕ್ಕೆ ಭೇಟಿ ನೀಡಿ ಕ್ರಮಕೈಗೊಳ್ಳುವವರೆ ಎಂದು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button