34ನೇ ವಾರ್ಡ್ ಅಭಿವೃದ್ಧಿ ಕಾಮಗಾರಿಗಳಿಗೆ ಸಚಿವ ಸಂತೋಷ್ ಲಾಡ್ ಚಾಲನೆ!
POLITICAL NEWS !

POWER CITYNEWS : HUBLI
ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ವಾರ್ಡ್ 34 ರಲ್ಲಿ ಇಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಭೂಮಿಪೂಜೆ ನೇರವೇರಿಸಿದ್ದಾರೆ.

ನಗರದ ದೇವರ ಗುಡಿಹಾಳ ರಸ್ತೆಯಲ್ಲಿ ಪಾಲಿಕೆಯ ವಾರ್ಡ್ ಸಂಖ್ಯೆ 34ಕ್ಕೆ ರಲ್ಲಿ ವಿವಿಧ ಕಾಮಗಾರಿಗಳಿಗೆ ಸಂಭಂದಿಸಿದಂತೆ ಒಟ್ಟು 8.65 ಕೋಟಿ ವೆಚ್ಚದಲ್ಲಿ 8 ವಿವಿಧ ಸದಸ್ಯರಾದ ಮಂಗಳಮ್ಮ ಗೌರಿ ಅವರ ಅನುದಾನದಲ್ಲಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.

ಕಳೆದ ಹಲವು ವರ್ಷಗಳಿಂದ ಪಾಲಿಕೆಯ 34 ನೇ ವಾರ್ಡನಲ್ಲಿ ಅನೇಕ ಸಮಸ್ಯೆಗಳ ಕುರಿತು ಜನರು ಸಮಸ್ಯೆಗಳನ್ನು ಹೇಳಿಕೊಂಡಿದ್ದಾರೆ. ಅದರಂತೆ ಪಾಲಿಕೆ ಸದಸ್ಯೆ ಮಂಗಳಮ್ಮ ಗೌರಿ ಅವರ ಸತತ ಪ್ರಯತ್ನದಿಂದ ದೇವರಗುಡಿಹಾಳ ರಸ್ತೆಯ ಡಾಂಬರೀಕರಣ, ಸುಭಾಷ್ ನಗರದಲ್ಲಿ ಕಾಂಕ್ರೀಟ್ ರಸ್ತೆ, ಆನಂದನಗರದ ಮುಖ್ಯರಸ್ತೆಯ ಚೆರಂಡಿಗೆ ಸ್ಲ್ಯಾಬ್, ಶೋಲ್ಡರ್, ಪೆವರ್ಸ್ ಅಳವಡಿಕೆ, ಬಾಸ್ಪನ್ ನಗರದಲ್ಲಿ ಒಳಚರಂಡಿ, ವಿಶಾಲ ನಗರದಲ್ಲಿ ತೆರೆದ ಚೆರಂಡಿ, ಉದ್ಯಾನವನ, ಯುಕೆಟಿ ಹಿಲ್ಸ್ ‘ನಲ್ಲಿ ಕಾಂಕ್ರೀಟಿಕರಣ, ಗುರುನಾಥ ನಗರದಲ್ಲಿ ರಸ್ತೆ ಕಾಂಕ್ರೀಟಿಕರಣ, ಸಿದ್ದಾರೋಢ ನಗರದಲ್ಲಿ ರಸ್ತೆ ಕಾಂಕ್ರೀಟಿಕರಣ, ಕೆಂಪಗೇರಿ, ಗೌರಿ ಶಂಕರ ನಗರದಲ್ಲಿ ರಸ್ತೆ ಕಾಮಗಾರಿ, ಆದರ್ಶ ನಗರದಲ್ಲಿ ಉದ್ಯಾನವನ ಅಭಿವೃದ್ಧಿ, ಮಗಜಿಕೊಂಡಿ ಪ್ಲಾಟ್ ನಲ್ಲಿ ಉದ್ಯಾನವನ, ಒಳಚರಂಡಿ, ಕಾಂಕ್ರೀಟಿಕರಣ ಹೀಗೆ ಹತ್ತಾರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಶುಭಹಾರೈಸಿದರು.
