Uncategorized
Trending

ಪೊಲೀಸರಿಂದ ಶಾಲಾ ವಿದ್ಯಾರ್ಥಿಗಳಿಗೆ ರಸ್ತೆಸುರಕ್ಷತೆ ಜಾಗೃತಿ ಶಿಬಿರ!

ಪೊಲೀಸ್ ಶಿಬಿರ!

POWER CITYNEWS : HUBBALLI

ಹುಬ್ಬಳ್ಳಿ : ( ಕರ್ನಾಟಕ ವಾರ್ತೆ) ಜ.20: ಇಂದು ಅದರಗುಂಚಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ-2024ರ ಅಂಗವಾಗಿ ರಸ್ತೆ ಸುರಕ್ಷತೆ ಜಾಗೃತಿ ಶಿಬಿರವನ್ನು ಏರ್ಪಡಿಸಲಾಗಿತ್ತು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಕೆ.ದಾಮೋದರ ಮಾತನಾಡಿ, ಶಾಲಾ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ಸಂಚಾರ ನಿಯಮಗಳು, ಹೆಲ್ಮೇಟ್‌ ಹಾಗೂ ಸೀಟ್‌ ಬೆಲ್ಟ್‌ ಧರಿಸುವುದು, ಸಂಚಾರಿ ಸಂಜ್ಞೆಗಳು, ಜೀಬ್ರಾ ಕ್ರಾಸಿಂಗ್‌ ಹಾಗೂ ವೃತ್ತಗಳಲ್ಲಿ ಅಳವಡಿಸಲಾಗಿರುವ ಸಂಚಾರಿ ಸೂಚನಾ ದೀಪಗಳ ಕುರಿತಂತೆ ಅರಿವು ಇರಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಭಿತ್ತಿ ಚಿತ್ರಗಳನ್ನು ಪ್ರದರ್ಶಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕರಾದ ಗುರುರಾಜ ದಾಶ್ಯಾಳ, ಶಿಕ್ಷಕರಾದ ಬಸವರಾಜ ಹೊಸಮನಿ, ಸಾರಿಗೆ ಇಲಾಖೆಯ ವಿನಾಯಕ ನಾಯಕ, ಕೀರ್ತಿ ಹುಕ್ಕೇರಿ, ಅಬ್ದುಲ್‌ ಸಲಾಂ, ಶಂಕರ ಕಲಾಲ ಸೇರಿದಂತೆ ವಿದ್ಯಾರ್ಥಿಗಳು, ಇತರರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button