Uncategorized

ಅಯೋಧ್ಯೆಯ ಶ್ರೀ ರಾಮನ ಚಿತ್ರದ ಹೊಸ 500ರ ನೋಟು ಬರುತ್ತಾ?

Jai shriram

POWER CITYNEWS : HUBBALLI

ಹುಬ್ಬಳ್ಳಿ : ಇಡೀ ವಿಶ್ವವೇ ಭಾರತದಲ್ಲಿ ನಡೆಯಲಿರುವ ಅಯೋಧ್ಯೆಯ ಶ್ರೀರಾಮ ಮಂದಿರದತ್ತ ದೃಷ್ಟಿ ನೆಟ್ಟು ಕೂತಿದೆ. ಬಹು ವರ್ಷಗಳಿಂದ ಶ್ರೀರಾಮ ದೇವಸ್ಥಾನ ನಿರ್ಮಾಣ ಮತ್ತು 42 ದಿನಗಳ ಕಾಲ ಪೂಜಾ ಮಂಡಲ ಕಾರ್ಯ ಹಾಗೂ ಶ್ರೀರಾಮ ಮೂರ್ತಿ ಪ್ರಾಣ ಪ್ರತಿಷ್ಠಾನ ಸೇರಿದಂತೆ ಗಣ್ಯಾತಿ ಗಣ್ಯರ ದಂಡೆ ಅಂದು ನಡೆಯಲಿರುವ ಭವ್ಯ ಸಮಾರಂಭವನ್ನು ಕಣ್ತುಂಬಿಕೊಳ್ಳಲು ಕುತೂಹಲದಿಂದ ಕಾಯುತ್ತಿದೆ.

ಆದರೆ ಇದೀಗ ಮತ್ತೊಂದು ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶ್ರೀರಾಮನ ಚಿತ್ರವಿರುವ ಹೊಸ ಐದು ನೂರು ರೂಪಾಯಿಯ ನೋಟು ಸದ್ದು ಮಾಡಿದೆ.

22/1/2024ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಪ್ರಾಣ ಪ್ರತಿಷ್ಠಾನದ ಪೂಜೆ ವೇಳೆ 500ರೂ. ನೋಟಿನಲ್ಲಿ ಪ್ರಭು ಶ್ರೀರಾಮಚಂದ್ರ ಹಾಗೂ ಅಯೋಧ್ಯ್ಯಾ ಮಂದಿರದ ಚಿತ್ರ ಇರುವ ಹೊಸ ನೋಟನ್ನು ಪರಿಚಯಿಸಲಿದೆ ಎಂಬ ಹೇಳಿಕೆಯೊಂದಿಗೆ ಶ್ರೀರಾಮನ ಚಿತ್ರ ಇರುವ ಐನೂರು ರೂಪಾಯಿ ನೋಟಿನ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇದು ಈಗ ಹಲವು ಚರ್ಚೆಗಳಿಗೆ ನಾಂದಿ ಹಾಡಲಿದ್ದು, ಪರ-ವಿರೋಧ ಚರ್ಚೆಗಳನ್ನು ಹುಟ್ಟು ಹಾಕಿದೆ. ಆದರೆ ಸದ್ಯಕ್ಕೆ ಇದು ಸುಳ್ಳು ಸುದ್ದಿ ಎಂಬ ಮಾಹಿತಿಯನ್ನ ಕೆಲವು ತಿಂಗಳ ಹಿಂದೆಯೆ RBI ಅಧಿಕೃತ ಮಾಹಿತಿ ನೀಡಿದೆ ಎನ್ನಲಾಗಿದೆ.

Related Articles

Leave a Reply

Your email address will not be published. Required fields are marked *

Back to top button