BJPBREAKING NEWSPolitical newsProtestTWINCITYರಾಜಕೀಯ
ಪ್ರವಾಹಕ್ಕೆ ಪರಿಹಾರ ಒದಗಿಸದಿದ್ದರೆ ಉಗ್ರ ಹೋರಾಟ ಮಾಜಿ ಸಚಿವ SPM : ಎಚ್ಚರಿಕೆ!
Raja dakhani

POWER CITYNEWS : HUBLI
ಹುಬ್ಬಳ್ಳಿ : ಹುಬ್ಬಳ್ಳಿ: ಬೆಣ್ಣೆಹಳ್ಳ ಮತ್ತು ತುಪ್ಪರಿಹಳ್ಳದ ಪ್ರವಾಹ ಮತ್ತು ಮಳೆಯಿಂದ ನಲುಗಿ ಹೋದವರಿಗೆ ತಕ್ಷಣವೇ ಸರಕಾರ ಪರಿಹಾರ ಒದಗಿಸಬೇಕೆಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಆಗ್ರಹಿಸಿದ್ದಾರೆ.
ಭಾರತೀಯ ಜನತಾ ಪಕ್ಷ ರಾಜ್ಯದಲ್ಲಿ ಅಧಿಕಾರ ಹೊಂದಿದ ಸಮಯದಲ್ಲಿ ಮಳೆ ಮತ್ತು ಪ್ರವಾಹದಿಂದ ನೊಂದವರಿಗೆ ತಕ್ಷಣವೇ ಪರಿಹಾರ ನೀಡಲಾಗಿತ್ತು. ಅದೇ ಎಬಿಸಿ ಮಾದರಿಯಲ್ಲಿ 10, 05 ಮತ್ತು 2.5ಲಕ್ಷ ರೂಪಾಯಿ ಹಣವನ್ನ ಪರಿಹಾರ ನೀಡಬೇಕು. ಸಂಪೂರ್ಣ ಹಾನಿಯಾದ ಮನೆಗಳಿಗೆ ಹತ್ತು ಲಕ್ಷ ರೂ, ಭಾಗಶಃ ಜಖಂಗೊಂಡ ಮನೆಗಳಿಗೆ ಐದು ಲಕ್ಷ ರೂ. ಹಾಗೂ ಅಲ್ಪ ಪ್ರಮಾಣದಲ್ಲಿ ಬಿದ್ದಿರುವ ಮನೆಗಳಿಗೆ ಎರಡೂವರೆ ಲಕ್ಷ ರೂಪಾಯಿ ನೀಡಬೇಕೆಂದು ಸರಕಾರವನ್ನ ಒತ್ತಾಯಿಸಿದ್ದಾರೆ.
ಪ್ರವಾಹ ಮತ್ತು ಮಳೆಯಿಂದ ನೊಂದ ರೈತ ಕುಟುಂಬಗಳಿಗೆ ತಕ್ಷಣವೇ ಹಣ ಬಿಡುಗಡೆ ಮಾಡದೇ ಹೋದಲ್ಲಿ ರೈತ ಸಮೂಹದೊಂದಿಗೆ ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಮಾಜಿ ಸಚಿವ ಶಂಕರ ಪಾಟೀಲಮುನೇನಕೊಪ್ಪ ಎಚ್ಚರಿಕೆ ನೀಡಿದ್ದಾರೆ.
