Jannah Theme License is not validated, Go to the theme options page to validate the license, You need a single license for each domain name.
ಧಾರವಾಡ

ಹೊಸ ವರ್ಷಕ್ಕೆ ಹೊಸ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ ಕೊಡಲಿದ್ದಾರೆ ಜನಪ್ರೀಯ ಪಾಲಿಕೆ ಸದಸ್ಯ ಅಂಚಟಗೇರಿ ಅವರು.

ಧಾರವಾಡ

ಧಾರವಾಡದಲ್ಲಿ ವಾರ್ಡ ನಂಬರ್ 3 ರಲ್ಲಿ ಡ್ರೈನೇಜ್ ಸಮಸ್ಯೆ ಸಾಕಷ್ಟು ಇದ್ದು, ಮಳೆಗಾಲದಲ್ಲಿ ತೀರಾ ವಾಹನ ಸವಾರರಿಗೆ ತೊಂದ್ರೆ ಆಗುತ್ತಿದೆ ಎಂದು ಪವರ್ ಸಿಟಿ ನ್ಯೂಸ್ ಕನ್ನಡ ಸುದ್ದಿ ಪ್ರಸಾರ ಮಾಡಿತ್ತು.

ಮಾಳಾಪೂರದ ಜನತೆ ಮಳೆಗಾಲದಲ್ಲಿ ಅಂತೂ ಡ್ರೈನೇಜ್ ನೀರಿನ ಲಿಕೇಜನಿಂದ ಕಂಗಾಲಾಗಿ ಹೋಗಿದ್ದರು. ವಾಹನ ಸವಾರರು ಇದೇ ಕೊಳಚೆ‌ನೀರಿನಲ್ಲಿ ಹೋಗುವಂತೆ ಆಗಿತ್ತು. ಡ್ರೈನೇಜ್ ಟಾಪ್ ಅಪಘಾತಕ್ಕೆ ಆಹ್ವಾನ ನೀಡುವಂತೆಯೂ ಇದೆ.

ಈ‌ ಬಗ್ಗೆ ಪಾಲಿಕೆ ಸದಸ್ಯ ಈರೇಶ ಅಂಚಟಗೇರಿ ಅವರ ಗಮನಕ್ಕೆ ಪವರ್ ಸಿಟಿ‌ನ್ಯೂಸ್ ಕನ್ನಡ ತಂದಾಗ ತಕ್ಷಣ ಕಾಳಜಿ ವಹಿಸಿದ್ದ ಪಾಲಿಕೆ ಸದಸ್ಯರು ಪಾಲಿಕೆ ಆಯುಕ್ತರಿಗೆ ಮಾತನಾಡಿದ್ದರು.

ಸಮಸ್ಯೆಯ ಗಂಭೀರತೆಯನ್ನು ತಿಳಿಸಿಕೊಟ್ಟಿದ್ದರು.

ಈ ವರದಿಗೆ ಇದೀಗ ಬಿಗ್ ಇಂಫ್ಯಾಕ್ಟ ಸಿಕ್ಕಂತೆ ಆಗಿದೆ.

ಮಾಳಾಪೂರದ ರಪಾಟಿ ಕಲ್ಯಾಣ ಮಂಟಪದಿಂದ ಹಿಡಿದು ಮುಜಾಹೀದ್ ಗ್ಯಾರೇಜ್ ವರೆಗೂ ಸಿಸಿ ರಸ್ತೆ ಮಾಡಿಸುವ ವರ್ಕಗೆ ಟೆಂಡರ್ ಆಗಿದೆ.‌

ನೀತಿ ಸಂಹಿತೆ ಇರುವ ಕಾರಣ, ಪರಿಷತ್ ಚುನಾವಣೆ ಮುಗಿದ ಮೇಲೆ ರಸ್ತೆ ಕಾಮಗಾರಿಗೆ ಹೊಸವರ್ಷದ ಮೊದಲ ತಿಂಗಳು ಕೇಂದ್ರ ಸಚಿವರು ಕಾಮಗಾರಿಗೆ ಚಾಲನೆ ಕೊಡಲಿದ್ದಾರೆ.

ಧಾರವಾಡ ನಗರದ ಸ್ಮಾರ್ಟ ಸಿಟಿಯಲ್ಲಿರುವ ಕೆಲವೊಂದು ವಾರ್ಡಗಳ ಸ್ಥಿತಿಗತಿ ನಾವು ತೊರಸ್ತಿವಿ ನೋಡಿ. ಅಂತಾ ಪವರ್ ಸಿಟಿ ನ್ಯೂಸ್ ಪ್ರಸಾರ ಮಾಡಿದ ವರದಿ ಇದು.

ವಾರ್ಡ್ ನಂಬರ್ 3 ರ ಪಾಲಿಕೆ ಸದಸ್ಯರಾರ ಈರೇಶ ಅಂಚಟಗೇರಿ ಅವರ ಈ ವಾರ್ಡ ಹೊಸ ವರ್ಷದಲ್ಲಿ ಹೊಸ ಸಿಸಿ ರೋಡಗಳನ್ನು ಕಾಣುವುದರ ಜೋತೆಗೆ ಪಾಲಿಕೆ ಸದಸ್ಯರು ಇನ್ನಷ್ಟು ಜನರಿಗೆ ಹತ್ತಿರವಾಗಿ ಜನಸ್ನೇಹಿ ಕಾರ್ಪೋರೇಟರ್ ಆಗುವುದರಲ್ಲಿ ಎರಡು ಮಾತಿಲ್ಲಾ.

Related Articles

Leave a Reply

Your email address will not be published. Required fields are marked *