BREAKING NEWSBusinessDHARWAD
ಆಧುನಿಕ LED ತಂತ್ರಜ್ಞಾನದ ಹೊಸ ಬ್ರ್ಯಾಂಡ್ ಅನಾವರಣಕ್ಕೆ ಹುಬ್ಬಳ್ಳಿ ಸಜ್ಜು
POWER CITY NEWS

POWER CITY NEWS: HUBBALLI
ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಹೆಜ್ಜೆಯಾಗಿ AR LED SCREENS ಸಂಸ್ಥೆಯ ನೂತನ ಬ್ರ್ಯಾಂಡ್ ಹಾಗೂ ಉತ್ಪನ್ನಗಳ ಬಿಡುಗಡೆ ಸಮಾರಂಭವನ್ನು ನವೆಂಬರ್ 19ರಂದು ಆಯೋಜಿಸಲಾಗಿದೆ.
ನಗರದ ವಿದ್ಯಾನಗರದಲ್ಲಿರುವ ಹೋಟೆಲ್ “ಫ್ಲೋಕ್ಸ್”ನಲ್ಲಿ ಸಂಜೆ 4 ಗಂಟೆಯಿಂದ ಕಾರ್ಯಕ್ರಮ ಆರಂಭವಾಗಲಿದೆ.
ಸಂಸ್ಥೆಯ ಹೊಸ ಬ್ರ್ಯಾಂಡ್ ಪರಿಚಯ ಹಾಗೂ ನೂತನ ಉತ್ಪನ್ನಗಳ ಅನಾವರಣ ಈ ಸಮಾರಂಭದ ಪ್ರಮುಖ ಆಕರ್ಷಣೆಯಾಗಿರಲಿದೆ.
ಸಂಸ್ಥೆಯ ಈ ಹೊಸ ಪ್ರಯತ್ನಕ್ಕೆ ಚಾಲನೆ ನೀಡುವ ವಿಶೇಷ ಕಾರ್ಯಕ್ರಮದಲ್ಲಿ ಗಣ್ಯರು, ಉದ್ಯಮಿಗಳು, ಗ್ರಾಹಕರು ಹಾಗೂ ಆಹ್ವಾನಿತರು ಭಾಗವಹಿಸಲಿದ್ದಾರೆ.
ಹೊಸ ಅಧ್ಯಾಯದ ಆರಂಭದ ಸಂಭ್ರಮದಲ್ಲಿರುವ AR LED SCREENS ಸಂಸ್ಥೆಯು
ಕಾರ್ಯಕ್ರಮಕ್ಕೆ ಎಲ್ಲರಿಗೂ ಆತ್ಮೀಯ ಆಹ್ವಾನ ನೀಡಿದೆ.
POWER CITY NEWS



