BREAKING NEWSDHARWADನವಲಗುಂದ

ಪಕ್ಷನಿಷ್ಠೆಗೆ ಸಿಕ್ಕ ಪ್ರತಿಫಲ: ಸುಲೇಮಾನ ನಾಶಿಪುಡಿಗೆ ನಿರ್ದೇಶಕ ಪಟ್ಟ!

Dakhani

POWER CITY KANNAD:ಹುಬ್ಬಳ್ಳಿ: ಕಾಂಗ್ರೆಸ್ ಪಕ್ಷದ ಸಂಘಟನೆಗಾಗಿ ನಿರಂತರವಾಗಿ ಶ್ರಮಿಸುತ್ತಾ ಬಂದಿರುವ ನವಲಗುಂದದ ಯುವ ಕಾಂಗ್ರೆಸ್ ನಾಯಕ ಸುಲೇಮಾನ ನಾಶಿಪುಡಿ ಅವರಿಗೆ ರಾಜ್ಯಮಟ್ಟದ ಮಹತ್ವದ ಜವಾಬ್ದಾರಿ ಒಲಿದಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರವು ಅವರನ್ನು ಮೈಸೂರು ಇಲೆಕ್ಟ್ರಿಕಲ್ ಇಂಡಸ್ಟ್ರೀಸ್ ಲಿಮಿಟೆಡ್‌ನ ನಿರ್ದೇಶಕರನ್ನಾಗಿ ನೇಮಕ ಮಾಡಿದೆ.
ನವಲಗುಂದ ಪಟ್ಟಣದ ಸುಲೇಮಾನ ನಾಶಿಪುಡಿ ಅವರು ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದು, ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ.
ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತಾ ಬಂದಿರುವ ಅವರ ನೇಮಕಾತಿಯಿಂದ ನವಲಗುಂದ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಂತಸ ಮೂಡಿದೆ.
ಪಕ್ಷಕ್ಕಾಗಿ ದುಡಿದ ಯುವ ಕಾರ್ಯಕರ್ತನಿಗೆ ರಾಜ್ಯಮಟ್ಟದ ನಿಗಮದಲ್ಲಿ ಜವಾಬ್ದಾರಿ ದೊರೆತಿರುವುದು ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದೆ.

Related Articles

Leave a Reply

Your email address will not be published. Required fields are marked *