ಸ್ಥಳೀಯ ಸುದ್ದಿ

ಅಕ್ಟೋಬರ್‌ 28 ಕ್ಕೆ ಪಾಲಿಕೆ ಸಭಾಭವನ ಉದ್ಘಾಟನೆ

ಧಾರವಾಡ

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಧಾರವಾಡ ಕೇಂದ್ರ ಕಚೇರಿಯ ಸಭಾಭವನದಲ್ಲಿ ಸಾಮಾನ್ಯ ಸಭೆಯನ್ನು ನಡೆಸುವ ನಿಟ್ಟಿನಲ್ಲಿ ಇಂದು ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಸಭಾಭವನದ ಕಾಮಗಾರಿಯನ್ನು ವೀಕ್ಷಣೆ ಮಾಡಿದರು.

ಈ ಸಂದರ್ಭದಲ್ಲಿ ಈ ತಿಂಗಳ 28 ನೇ ದಿನಾಂಕದಂದು ಬೆಳಿಗ್ಗೆ 10:30 ಗಂಟೆಗೆ ನೂತನ ಸಭಾಭವನದ ಉದ್ಘಾಟನೆ ಕಾರ್ಯಕ್ರಮ ಹಾಗೂ ಮಧ್ಯಾಹ್ನ 12:00 ಗಂಟೆಗೆ ಈ ತಿಂಗಳ ಸಾಮಾನ್ಯ ಸಭೆಯನ್ನು ನಡೆಸುವುದಾಗಿ ಪ್ರಕಟಿಸಿದರು.

ಈ ಸಂದರ್ಭದಲ್ಲಿ ಪಾಲಿಕೆಯ ಸದಸ್ಯರಾದ ವಿಜಯಾನಂದ ಶೆಟ್ಟಿ , ಸುರೇಶ ಬೆದರೆ, ಶಂಕರ ಶೇಳಕೆ, ವಿಷ್ಣು ಕೊರ್ಲಹಳ್ಳಿ, ಅನಿತಾ ಚಳಗೇರಿ, ಜ್ಯೋತಿ ಪಾಟೀಲ, ನೀಲಮ್ಮ ಅರವಳದ, ಶ್ರೀ ಶಂಭು ಸಾಲಿಮನಿ, ಬಿಲ್ಕಿಸ್ ಬಾನು ಮುಲ್ಲಾ , ಪಾಲಿಕೆಯ ಅಧಿಕಾರಿಗಳಾದ ಟಿಮ್ಮಪ್ಪ, ಆರ್.ಎಂ. ಕುಲಕರ್ಣಿ ರವರು, ರಾಜೇಶ ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button