ಅತ್ಯಾಧುನಿಕ ರೈಲ್ವೆ ಸ್ಟೇಶನ್ ಉದ್ಘಾಟನೆ
ಧಾರವಾಡ
ಧಾರವಾಡ ರೈಲ್ವೆ ನಿಲ್ದಾಣ 20.4 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕವಾಗಿ ಅಭಿವೃದ್ಧಿ ಆಗಿದ್ದು, ಇಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಉದ್ಘಾಟನೆ ಮಾಡಿದ್ರು. ಈ ವೇಳೆ ಕೇಂದ್ರ ಸಚಿವ ಪ್ರಹ್ಲಾದ
ಜೋಶಿ ಅವರು, ನಿಜ್ಜಾಮುದ್ದೀನ್ ರೈಲಿನ ಹೆಸರನ್ನು ಸವಾಯಿ ಗಂಧರ್ವ ರೈಲು ಎಂದು ಮರುನಾಮಕರಣ ಮಾಡಿ ಎಂದು ಮನವಿ ಮಾಡಿದ್ರು. ಅಲ್ಲದೇ ಕೇಂದ್ರ ಸಚಿವರಿಗೆ ಧಾರವಾಡ ಪೇಢಾ ಕೊಟ್ಟು ಸನ್ಮಾನಿಸಿ
ಕಾರ್ಯಕ್ರಮ ಯಶಸ್ವಿ ಮಾಡಿದ್ರು..
ಧಾರವಾಡದಲ್ಲಿ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸತತ ಪ್ರಯತ್ನದ ಫಲವಾಗಿ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ಆಗಿದ್ದು, ಎಲ್ಲರ ಗಮನ ಸೆಳೆಯುವಂತೆ ಆಗಿದೆ. ಇಂದು ಕೇಂದ್ರ ರೈಲ್ವೆ
ಸಚಿವ ಅಶ್ವಿನಿ ವೈಷ್ಣವ್ ಕಾರ್ಯಕ್ರಮ ಉದ್ಘಾಟನೆ ಮಾಡಿದ್ರು. ಈ ವೇಳೆ ಮಾತನಾಡಿದ ಸಮಾರಂಭದ ಅಧ್ಯಕ್ಷೆತೆ ವಹಿಸಿದ್ದ ಅರವಿಂದ ಬೆಲ್ಲದ ಅವರು, ಸುಂದರ ಧಾರವಾಡ ನಗರಕ್ಕೆ ಮತ್ತೊಂದು ಗರಿಮೆ ಸಿಕ್ಕಂತೆ ಆಗಿದ್ದು,
ಇದಕ್ಕೆಲ್ಲಾ ಪ್ರಹ್ಲಾದ ಜೋಶಇ ಅವರು ಮೋದಿ ಅವರೇ ಕಾರಣ ಎಂದರು. ಧಾರವಾಡ ಜಿಲ್ಲೆ ಉಸ್ತುವಾರಿ ಸಚಿವ ಹಾಲಪ್ಪಾ ಆಚಾರ ಮಾತನಾಡಿ, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅಭಿವೃದ್ಧಿಗೆ ಇನ್ನೊಂದು ಹೆಸರು,
ಇಂತಹ ವ್ಯಕ್ತಿ ಧಾರವಾಡ ಜಿಲ್ಲೆಯಲ್ಲಿರುವುದು ನಮ್ಮೇಲರ ಹೆಮ್ಮೆ ಎಂದರು.
ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹುಬ್ಬಳ್ಳಿಯಿಂದ ಹೊರಡುವ ನಿಜ್ಜಾಮುದ್ದೀನ್ ರೈಲಿನ ಹೆಸರನ್ನು, ಸವಾಯಿ ಗಂಧರ್ವ ರೈಲು ಎಂದು
ಮರುನಾಮಕರಣ ಮಾಡಿ ವಾರಕ್ಕೆ 2 ಬಾರಿ ಬಿಡುವಂತೆ ಮನವಿ ಮಾಡಿದ್ರು.ಧಾರವಾಡ ರೈಲ್ವೆ ನಿಲ್ದಾಣಕ್ಕೆ ಬಹಳ ಇತಿಹಾಸವಿದೆ, ರೈಲ್ವೆ ಲೈನ್ ಎಲ್ಸಿ 300 ಮಾಡಿಕೊಡಿ ಎಂದರು.
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಕನ್ನಡದಲ್ಲಿ ನಮಸ್ಕಾರ ಎಲ್ಲರಿಗೂ ಎಂದು ಮಾತನಾಡುತ್ತಾ, ಪ್ರಹ್ಲಾದ ಜೋಶಿ ಅವರು ನನ್ನ ಅಣ್ಣನಿದ್ದ ಹಾಗೆ, ಪೇಢಾ ನಗರಿ ಧಾರವಾಡ 5 ಮಂದಿ ಜ್ಞಾನಪೀಠ
ಪ್ರಶಸ್ತಿ ಪುರಸ್ಕೃತರನ್ನು ಪಡೆದಿದೆ. ರೈಲ್ವೆ ಲೈನ್ ಎಲ್ಸಿ 300 ಈಗ ತಾನೆ ಆದೇಶವಾಗಿದೆ ವೇದಿಕೆಯಲ್ಲಿ ಘೋಷಣೆ ಮಾಡಿ ತಿಳಿಸಿದ್ರು. ಅಲ್ಲದೇ ನಿಜಾಮುದ್ದೀನ ರೈಲಿನ ಹೆಸರನ್ನುಸವಾಯಿ ಗಂಧರ್ವ ರೈಲು ಎಂದು ನಾಮಕರಣ ಮಾಡಲು ಚರ್ಚೆ ಮಾಡುವೆ ಎಂದು ತಿಳಿಸಿದ್ರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ವಂದೇ ಭಾರತ ರೈಲನ್ನು ಮೋದಿ ಅವರೊಂದಿಗೆ ಮಾತನಾಡಿ ಧಾರವಾಡ ಜಿಲ್ಲೆಗೆ ಚಾಲನೆ ಕೊಡಿಸುವೆ ಎಂದರು. ಇದೇ ಸಂದರ್ಭದಲ್ಲಿ
ಕೇಂದ್ರ ರೈಲ್ವೆ ಸಚಿವರಿಗೆ ಧಾರವಾಡ ಪೇಢಾ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಅತ್ಯಂತ ಯಶಸ್ವಿಯಾಗಿ ನಡೆದ ಕಾರ್ಯಕ್ರಮಕ್ಕೆ ಧಾರವಾಡ ಜಿಲ್ಲೆಯ ಮಂದಿ ಸಾಕ್ಷಿಯಾದ್ರು..
ಈ ಸಂದರ್ಭದಲ್ಲಿ ಹುಬ್ಬಳ್ಳಿ ಧಾರವಾಡ ಮೇಯರ್ ಈರೇಶ ಅಂಚಟಗೇರಿ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ, ಜಂಗಲ್ ರೆಸಾರ್ಟ್ ಚೆರಮನ್ ರಾಜು ಕೊಟ್ಟೆನ್ನವರ್, ಜಿಲ್ಲಾಧಿಕಾರಿ ಗುರುದತ್ ಹೆಗಡೆ, ಎಸಪಿ ಲೋಕೆಶ, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಲಾಬುರಾಮ್ ಸೇರಿದಂತೆ ರೈಲ್ವೆ ಇಲಾಕೆಯ ಹಿರಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಇದ್ದರು.