ಅನಾಮಧೇಯ ಪತ್ರಗಳ ಬಗ್ಗೆ ಪೊಲೀಸ್ ಠಾಣೆಗೆ ದೂರು
ಧಾರವಾಡ
ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು, ಇಂದು ಧಾರವಾಡ ಉಪನಗರ ಪೊಲೀಸ್ ಠಾಣೆಗೆ ತೆರಳಿ, ಅನಾಮಧೇಯ ಪತ್ರಗಳ ಬಗ್ಗೆ ದೂರು ಕೊಟ್ಟಿದ್ದಾರೆ.
ಸಿಎಂ ಬೊಮ್ಮಾಯಿ, ಗೃಹ ಸಚಿವ , ಪೊಲೀಸ್ ಮಹಾನಿರ್ದೇಶಕರು, ಬೆಳಗಾವಿ ಉತ್ತರ ವಲಯದ ಐಜಿಪಿ, ಪೊಲೀಸ್ ಆಯುಕ್ತರು ಹುಬ್ಬಳ್ಳಿ ಧಾರವಾಡ ಹಾಗೂ ಉಪನಗರ ಪೊಲೀಸ್ ಇನ್ಸಪೇಕ್ಟರಗೆ ದೂರು ಸಲ್ಲಿಸಿದ್ದಾರೆ.
ಸುಮಾರು 4 ವರೆ ವರ್ಷಗಳ ಬಳಿಕ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಮನೆಗೆ ಬೆದರಿಕೆ ಪತ್ರಗಳು ನಿರಂತರವಾಗಿ ಬರುತ್ತಿವೆ.
ಈಗಾಗಲೇ ಈ ಹಿಂದೆ ಸಿಬಿಐ ಕೇಸ್ ನಂತೆ ಮತ್ತೆ ನಿಮಗೆ ಸಂಕಷ್ಟ ಬರುತ್ತೆ. ನೀವು ಬಂದು ನಮ್ಮ ಜೋತೆಗೆ ಮಾತನಾಡಿ ಎಂದು ಬೆದರಿಕೆಯ ಅನಾಮಧೆಯ ಪತ್ರದಲ್ಲಿ ಉಲ್ಲೇಖ ಮಾಡಲಾಗಿದೆ.
ಬಿಜೆಪಿ ನಾಯಕರು ಹಾಗೂ 3 ಮಂದಿ ವಕೀಲರು ಕೂಡಿ ನಡೆಸುತ್ತಿರುವ ಸಂಚು ಗೊತ್ತಾಗಿದೆ ಎಂದು ಅನಾಮಧೇಯ ಪತ್ರದಲ್ಲಿ ಬರೆಯಲಾಗಿದೆ. ಈ ಬೆದರಿಕೆ ಪತ್ರಗಳಿಗೆ ಮಾಜಿ ಸಚಿವರ ಪತ್ನಿ ಶಿವ ಲೀಲಾ ಕುಲಕರ್ಣಿ ಅವರು ಖಡಕ್ ಆಗಿ ಉತ್ತರ ಕೊಟ್ಟಿದ್ದು, ಚುನಾವಣೆಗೆ ನಿಲ್ಲೊದು ಆದ್ರೆ ಫೀಲ್ಡಗೆ ಬಂದು ಚುನಾವಣೆ ಎದುರಿಸಿ ಎಂದು ವಾರ್ನ ಮಾಡಿದ್ದಾರೆ.
ಅನಾಮಧೇಯ ಪತ್ರದಲ್ಲಿ ಧಾರವಾಡದ ವಿಜಯಲಕ್ಷ್ಮಿ ಹೆಸರು, ಕುಂದಗೋಳ, ಲಕ್ಷ್ಮೇಶ್ವರ, ಹುಬ್ಬಳ್ಳಿ , ಅಥಣಿ ಊರಿನ ದೊಡ್ಡ ಮಟ್ಟದ ಬಿಜೆಪಿ ನಾಯಕರು ಇದ್ದಾರೆ ಎನ್ನುವ ಮಾತುಗಳ ಬಗ್ಗೆ ಉಲ್ಲೇಖವಾಗಿದೆ.
ಒಂದು ಗೋಣಿ ಚೀಲ ಅನಾಮಧೇಯ ಪತ್ರಗಳಷ್ಟು 2018 ರ ವಿಧಾನಸಭೆ ಚುನಾವಣೆ ಹಾಗೂ 2019 ರ ಲೋಕಸಭೆ ಚುನಾವಣೆಯಲ್ಲಿ ಬಂದಿದ್ದವು. ಅವುಗಳನ್ನು ನೆಗ್ಲೆಕ್ಟ ಮಾಡಿದ್ವಿ. ಆದ್ರೆ ಇನ್ನು ಮುಂದೆ ಕಾನೂನು ಹೋರಾಟ ಮಾಡುತ್ತೇವೆ ಎಂದು ಶಿವಲೀಲಾ ಕುಲಕರ್ಣಿ ತಿಳಿಸಿದ್ರು.