ಅನಿಲಕುಮಾರ ಪಾಟೀಲ ಗೆ ಹೃದಯಾಘಾತ : ಕಿಮ್ಸ್ ಗೆ ದಾಖಲು!
Power city news :ಹುಬ್ಬಳ್ಳಿ
ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಾಜಿ ಮೇಯರ್ ಹಾಗೂ ಕಾಂಗ್ರೆಸ್ ಪಕ್ಷದ ಗ್ರಾಮಿಣ ಅಧ್ಯಕ್ಷರಾದ ಅನಿಲಕುಮಾರ ಪಾಟೀಲ ಅವರಿಗೆ ಇಂದು ಹೃದಯಾಘಾತ ವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆಂದು ತಿಳಿದು ಬಂದಿದೆ.
ಮೇ10ರಂದು ನಡೆಯಲಿರುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಅವಳಿನಗರದ ಸೆಂಟ್ರಲ್ ಮತ ಕ್ಷೇತ್ರದ ಅಭ್ಯರ್ಥಿ ಮಾಜಿ ಸಿ ಎಮ್ ಜಗದಿಶ್ ಶೆಟ್ಟರ್ ಅವರಿಗೆ ಬೆಂಬಲಿಸಿ ಕ್ಷೇತ್ರದ ಉದ್ದಗಲಕ್ಕೂ ಶ್ರಮಿಸಿದ್ದ ಕಾರಣ ಭಾಗಶಃ ಆರೋಗ್ಯದಲ್ಲಿ ಒಂದಷ್ಟು ಬದಲಾವಣೆ ಯಾಗಿರ ಬಹುದು ಎಂದು ಕಾರ್ಯಕರ್ತರ ಮಾತಾಗಿದೆ.
ಸದಾ ಫಿಟ್ ಆ್ಯಂಡ್ ಫೈನ್ ಆಗಿರ್ತಿದ್ದ ಅನಿಲ ಕುಮಾರ ಪಾಟೀಲ್ ಅವರು ಎಂದಿನಂತೆ ಪಕ್ಷದ ಕಾರ್ಯ ಚಟುವಟಿಕೆಯಲ್ಲಿ ತೊಡಗಿರುವ ಸಂಧರ್ಭದಲ್ಲಿ ಎದೆಯಲ್ಲಿ ನೋವು ಕಾಣಿಸಿಕೊಂಡಿದೆ ಇ ವೇಳೆ ತಡಮಾಡದ ಆಪ್ತರು ಅವರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸುದ್ದಿ ತಿಳಿದ ಕಾಂಗ್ರೆಸ್ ಪಕ್ಷದ ನೂರಾರು ಕಾರ್ಯಕರ್ತರು ಹಾಗೂ ಪಕ್ಷದ ಮುಖಂಡರು ಆಸ್ಪತ್ರೆ ಬಳಿ ಜಮಾವಣೆಗೊಂಡಿದ್ದಾರೆ.