ಸ್ಥಳೀಯ ಸುದ್ದಿ
ಅಮರನಾಥ ಯಾತ್ರೆಗೆ ಹೊರಟಿದ್ದವರು ಪಂಚತರಣಿಯಲ್ಲಿ ಸಂಕಷ್ಟಕ್ಕೆ- ಸುರಕ್ಷಿತ ಸಂರಕ್ಷಣೆಗೆ ಶಾಸಕ ವಿನಯ ಕುಲಕರ್ಣಿ ಸಹಾಯಹಸ್ತ.

ಧಾರವಾಡ
ಧಾರವಾಡ ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿನ ವಿಠಲ ಬಾಚಗುಂಡಿ ಹಾಗೂ ಸ್ನೇಹಿತರು ಅಮರನಾಥ ಯಾತ್ರೆಗೆ ಹೋಗುವ ವೇಳೆಯಲ್ಲಿ ಗುಡ್ಡ ಕುಸಿತದ ಪರಿಣಾಮವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ.


ಕಳೆದ 5 ದಿನಗಳಿಂದ ಪಂಚತರಣಿಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಅವರು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಅವರಿಗೆ ಫೋನ ಮೂಲಕ ಮಾಹಿತಿ ತಿಳಿಸಿದ್ದಾರೆ.

ಕೂಡಲೇ ಸಂಕಷ್ಟದಲ್ಲಿರುವ ಸಹಾಯಕ್ಕೆ ಮುಂದಾದ ಶಾಸಕರು ಸಿಎಂ ಹಾಗೂ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮಾಹಿತಿ ನೀಡಿ ಅವರನ್ನು ಸುರಕ್ಷಿತವಾಗಿ ಬೇರೆಡೆಗೆ ಸ್ಥಳಾಂತರ ಮಾಡಲು ಮುಂದಾಗಿದ್ದಾರೆ.
