ಸ್ಥಳೀಯ ಸುದ್ದಿ
ಅಮಾನತ್ತುಗೊಂಡ ಶಾಸಕರನ್ನು ಹೊತ್ತು ಹೋಗುವಾಗ ಕುಸಿದು ಬಿದ್ದ ಇಬ್ಬರು ಶಾಸಕರು


ಬೆಂಗಳೂರು: ವಿಧಾನಸಭೆಯಲ್ಲಿ ಇಂದು ಬಿಲ್ ಗಳನ್ನು ಹರಿದು ಹಾಕಿ, ಸ್ಪೀಕರ್ ಪೀಠದ ಮೇಲೆಯೇ ಬಿಜೆಪಿ ಶಾಸಕರು ಎಸೆದಿದ್ದರು. ಹೀಗೆ ವಿಧಾನಸಭೆಯಲ್ಲಿ ಅಗೌರವ ತೇರಿದಂತ 10 ಮಂದಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ ಖಾದರ್ ಅಮಾನತುಗೊಳಿಸಿದ್ದರು.

ಹೀಗೆ ಅಮಾನತುಗೊಂಡು ಸದದಲ್ಲೇ ಇದ್ದಂತ ಶಾಸಕರನ್ನು ಮಾರ್ಷಲ್ ಗಳು ಹೊತ್ತು ಹೊರ ಹಾಕಿದರು.ಮಾರ್ಷಲ್ ಗಳು ಅಮಾನತ್ತುಗೊಂಡ ಶಾಸಕರನ್ನು ಹೊತ್ತು ಹೊರತೆಗೆದುಕೊಂಡು ಹೋಗುವಾಗ ಬಸವನಗೌಡ ಯತ್ನಾಳ್ ಮತ್ತು ಆರ್ ಅಶೋಕ್ ಕುಸಿದು ಬಿದ್ದಿದ್ದು, ಇದೀಗ ವಿಧಾನ ಸಭೆಯಲ್ಲಿದ್ದ ವೈದ್ಯರು ಬಿಪಿ ಚೆಕಪ್ ಮಾಡುತ್ತಿದ್ದಾರೆ, ಮುಂದೇನಾಗುತ್ತದೆ ಎಂದು ಕಾದು ನೋಡಬೇಕಿದೆ.
