ಸ್ಥಳೀಯ ಸುದ್ದಿ
ಅಳ್ಳಾವರಲ್ಲಿ ಮೊಸಳೆ ಪ್ರತ್ಯಕ್ಷ
ಧಾರವಾಡ
ಜಿಲ್ಲಾ ಉಸ್ತುವಾರಿ ಸಚಿವರ ಸ್ವಕ್ಷೇತ್ರದಲ್ಲಿ ಇದೀಗ ಮೊಸಳೆ ಆತಂಕ ಶುರುವಾಗಿದೆ.
ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಕ್ಷೇತ್ರ ಕಲಘಟಗಿ ತಾಲೂಕಿನ ಅಳ್ಳಾವರ ಮತಕ್ಷೇತ್ರದಲ್ಲಿ ಹಳ್ಳದಲ್ಲಿ ಮೊಸಳೆ ಕಂಡು ಗಾಬರಿಯಾಗಿದ್ದಾರೆ ಗ್ರಾಮಸ್ಥರು.
ಬುಧವಾರ ತಡರಾತ್ರಿ ಮೊಸಳೆ ಪ್ರತ್ಯಕ್ಷವಾಗಿದ್ದು, ಅಳ್ನಾವರ ಹಾಗೂ ಬೆಳಗಾವಿ ಜಿಲ್ಲೆಯ ಗಡಿಭಾಗದಲ್ಲಿನ ಗುಂಡೊಳ್ಳಿ ಗ್ರಾಮದ ನಡುವಿನ ಸೇತುವೆ ಮೇಲೆ ಅಡ್ಡಾಡುತ್ತಿದ್ದ ಮೊಸಳೆ ಕಂಡು ಸ್ಥಳೀಯ ನಿವಾಸಿಗಳು ಹೌಹಾರಿದ್ದಾರೆ.
ಬೆಳಗಾವಿ ಜಿಲ್ಲೆಯ ಗುಂಡೊಳ್ಳಿ ಗ್ರಾಮಕ್ಕೆ ಬಸ್ ವ್ಯವಸ್ಥೆ ಇಲ್ಲದೆ ಇರುವುದರಿಂದ, ಪ್ರತಿನಿತ್ಯ ಇದೇ ಸೇತುವೆ ಮೇಲಿನಿಂದ ಅಳ್ಳಾವರಕ್ಕೆ ಬಂದಿರುವ ಜನರು ಖಾಸಗಿ ವಾಹನಗಳ ಮೂಲಕ ತಿರುಗಾಡುತ್ತಾರೆ.