ಧಾರವಾಡರಾಜಕೀಯರಾಜ್ಯಸ್ಥಳೀಯ ಸುದ್ದಿ

ಅವಳಿನಗರದಲ್ಲಿ “ಭೂ ಮಾಫಿಯಾ” : ಗಾಳಿಯಲ್ಲಿ ಡಿಶ್ಕ್ಯಾಂವ್!

powercity news:

ಧಾರವಾಡ:

ಇಂದು ಬೆಳಿಗ್ಗೆ ಜಮಿನೊಂದರ ವಿಷಯವಾಗಿ ನಡೆದ ತಕರಾರಿನಲ್ಲಿ ಜಮಿನಿನ ಮೂಲ ಮಾಲಿಕರೊರ್ವರು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಎದುರಾಳಿ ತಂಡದ ವ್ಯಕ್ತಿಗಳನ್ನ ಬೆದರಿಸಲು ಮುಂದಾದ ಘಟನೆ ಧಾರವಾಡದ ಶ್ರೀ ರಾಮನಗರದ ಯುನಿವರ್ಸಿಟಿ ರಸ್ತೆ ಬಳಿ ನಡೆದಿದೆ.

ಇಂದು ಬೆಳಿಗ್ಗೆ ಕೆಲ ರಿಯಲ್ ಎಸ್ಟೇಟ್ ನಲ್ಲಿ ಪಳಗಿರುವ ಕುಳಗಳು ಹಾಗೂ ಅವರೊಂದಿಗೆ ಇದ್ದರು ಎನ್ನಲಾದ ಒಂದಷ್ಟು ತೋಳ್ಬಲದ ಆ್ಯಂಟಿ ಸೊಷೀಯಲ್ ಎಲಿಮೆಂಟ್ಸ್‌ಗಳ ಜೊತೆಗುಡಿ ಕೊಂಡು ಸುಶಾಂತ ಅಗರ್‌ವಾಲ್ ಎಂಬುವವರೊಂದಿಗೆ ಜಮಿನೊಂದ ವಿಷಯವಾಗಿ ವಾಗ್ವಾದ ನಡೆದಿದೆ ಎನ್ನಲಾಗಿದೆ. ಈ ವೇಳೆ ಕೋಪಗೊಂಡ ಸುಶಾಂತ ಅಗರವಾಲ್ ಎಂಬ ವ್ಯಕ್ತಿ ತಮ್ಮ ಬಳಿ ಇದ್ದ ರಿವಾಲ್ವರ್ ನಿಂದ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆಂದು ತಿಳಿದು ಬಂದಿದೆ.

ಇ ಕುರಿತು ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಎರಡು ತಂಡದವರನ್ನು ಠಾಣೆಗೆ ಒಯ್ದು ವಿಚಾರಣೆ ನಡೆಸುತ್ತಿದ್ದು. ಘಟನೆಯಲ್ಲಿ ಭಾಗಿಯಾದವರು ಯಾರು! ಎಲ್ಲಿಯವರು ಎನ್ನುವ ಕುರಿತು ಮತ್ತಷ್ಟು ಸತ್ಯಾಂಶಗಳನ್ನ ಪೊಲೀಸರ ತನಿಖೆಯಿಂದ ಹೊರಬಿಳಬಿವುದೆ ಎಂದು ಕಾದು ನೋಡಬೇಕಿದೆ.

Related Articles

Leave a Reply

Your email address will not be published. Required fields are marked *

Back to top button