ಸ್ಥಳೀಯ ಸುದ್ದಿ

ಉಪ್ಪಿನಬೆಟಗೇರಿಯಲ್ಲಿ ಶಿವಲೀಲಾ ಕುಲಕರ್ಣಿ ಅವರಿಂದ ಪ್ರಚಾರ

Click to Translate

ಧಾರವಾಡ

ಇಂದು ಉಪ್ಪಿನ ಬೆಟಗೇರಿಯಲ್ಲಿ ಶಿವಲೀಲಾ ಕುಲಕರ್ಣಿಯವರಿಗೆ ನಾವು ನಿಮ್ಮೊಂದಿಗೆ ಎಂದು ಬರವಸೆ ನೀಡಿದ ಮಹಿಳೆಯರು……

ಶ್ರಿ ವಿನಯ ಕುಲಕರ್ಣಿಯವರ ಪರವಾಗಿ ಇಂದು ಉಪ್ಪಿನ ಬೆಟಗೇರಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಶಿವಲೀಲಾ ಕುಲಕರ್ಣಿಯವರು ಮಾತನಾಡಿ,ಬೆಟಗೇರಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಹಳ್ಳಿಗಳಿಗೂ ಮೂಲಭೂತ ಸೌಕರ್ಯಗಳು,ಹಾಗೂ ಹೊಲದ ರಸ್ತೆಗಳು, ಚೆಕಡ್ಯಾಮಗಳನ್ನು ನಿರ್ಮಿಸಿ ವಿನಯಕುಲಕರ್ಣಿಯವರು,
ರೈತರಿಗೆ ಅನುಕೂಲ ಮಾಡಿ ಕೊಟ್ಟಿದ್ದಾರೆ.


ಜನರಿಗೆ,ಅನುಕೂಲವಾಗಬೇಕು ಆರೋಗ್ಯದ ಹಿತದೃಷ್ಠಿಯಿಂದ ಅವರಿಗೆ ಯಾವುದೇ ತೊಂದರೆಗಳಾಗಬಾರದು ಹಾಗೂ ಸಕಾಲಕ್ಕೆ ಆರೋಗ್ಯ ಸೇವೆ ದೊರಕಿಸುವ ಹಿನ್ನೆಲೆಯಲ್ಲಿ ಸ್ವಂತ ಖರ್ಚಿನಲ್ಲಿ ಅಂಬ್ಯೂಲನ್ಸ ನೀಡಿದ್ದನ್ನು ಸ್ಮರಿಸಿದರು.
ಎಲ್ಲ ಸಮಾಜಗಳಿಗೂ ಅನುಕೂಲವಾಗುವಂತೆ,
ಸಮುದಾಯ ಭವನಗಳು,ದೇವಸ್ಥಾನಗಳ ಜೀರ್ಣೋಧ್ಧಾರ ಮಾಡಿದ ಹೆಗ್ಗಳಿಕೆ ವಿನಯ ಕುಲಕರ್ಣಿಯವರದು
ಅವರಿಗೆ ತಾವೆಲ್ಲಾ ಆಶೀರ್ವಾದ ಮಾಡಬೇಕೆಂದು ವಿನಂತಿಸಿದರು.

ಇದೇ ಸಂಧರ್ಭದಲ್ಲಿ ಸೇರಿದ ನೂರಾರು ಮಹಿಳೆಯರು ಒಕ್ಕೊರಲಿನಿಂದ ವಿನಯ ಕುಲಕರ್ಣಿಯವರು ಮಾಡಿದ ಕೆಲಸಗಳು ಹಾಗೂ ಅವರಿಗೆ ಜನರೊಂದಿಗೆ ಇರುವ ಬಾಂಧವ್ಯ ನಿಮಗೆ ಶ್ರೀ ರಕ್ಷೆಯಾಗಲಿದೆ. ನಾವು ನಿಮ್ಮೊಂದಿಗೆ ಸದಾ ಇದ್ದೇವೆ. ನೀವು ಹೆದರದೇ ಮುನ್ನುಗ್ಗಿ ಎಂದು ಆಶ್ವಾಸನೆ ನೀಡಿದರು.

ಈ ಸಂಧರ್ಭದಲ್ಲಿ ವಸಂತಾ ಜಾವಳಿಮಠ, ಸಾಯಿರಾಬಾನು, ಲಾಲ್ಮಿಯ್ ಈಶ್ವರ ಶಿವಳಿ, ಕಲ್ಲಪ್ಪ ಪುಡಕಲಕಟ್ಟಿ, ಬಾಬಾ ಮೈನುದಿನ ಚೌದ್ರಿ, ಪರಮೇಶ್ವರ ದೊಡವಾಡ್ ಮಂಜುನಾಥ ಸಂಕಣವರ, ಮಂಜುನಾಥ್ ಮಸೂತಿ, ಕಲ್ಲಪ್ಪ ಬೋಬ್ಬಿ, ಬಶೀರ್ ಮಳಗಿಮಣಿ ,ಚೇತನ್ ವಿಜಾಪುರ್, ಶ್ರೀಶೈಲ್ ಮಸೂತಿ ಪ್ರಕಾಶ್ ಶಬರದ, ಇಮ್ರಾನ್ ಪಾಟೀಲ್ ಸೇರಿದಂತೆ ನೂರಾರು ಜನರು ಸೇರಿದ್ದರು

Related Articles

Leave a Reply

Your email address will not be published. Required fields are marked *

Back to top button