ಧಾರವಾಡ
ಎಸ್ ಡಿ ಎಂ ನಲ್ಲಿ ಹೊಸ 77 ಕೋವಿಡ್ ಪ್ರಕರಣಗಳು ಪತ್ತೆ.
![](https://www.powercity.news/wp-content/uploads/2021/11/Screenshot_2021-11-27-08-06-03-721_com.google.android.googlequicksearchbox.jpg)
ಇಲ್ಲಿನ ಎಸ್ ಡಿ ಎಂ ಮೆಡಿಕಲ್ ಕಾಲೇಜು ಹಾಗೂ ಆಸ್ಪತ್ರೆಯಲ್ಲಿ ಕಾಣಿಸಿಕೊಂಡಿರುವ ಕೋವಿಡ್ ಸೋಂಕು ಇಂದು ಮತ್ತೆ 77 ಜನರಲ್ಲಿ ದೃಢವಾಗಿದೆ. ಈ ಬಗ್ಗೆ
ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮಾಧ್ಯಮ ಮಾಹಿತಿ ನೀಡಿದ್ದಾರೆ.
![](http://powercity.news/wp-content/uploads/2021/11/Screenshot_2021-11-27-08-04-18-691_com.google.android.googlequicksearchbox.jpg)
ಕಳೆದ ಎರಡು ದಿನಗಳಲ್ಲಿ 204 ಜನರಲ್ಲಿ ಹಾಗೂ ಇಂದು 77 ಪ್ರಕರಣಗಳು ಸೇರಿ ಒಟ್ಟು 281 ಕೋವಿಡ್ ಪ್ರಕರಣಗಳು ದೃಢವಾಗಿವೆ.
![](http://powercity.news/wp-content/uploads/2021/11/IMG_20211127_080803.jpg)
ಎಲ್ಲರಿಗೂ ಚಿಕಿತ್ಸೆ,ಔಷಧೋಪಚಾರ ನಡೆಯುತ್ತಿದೆ.ಸೋಂಕಿತರನ್ನು ಕ್ವಾರಂಟೈನ್ ಮಾಡಲಾಗಿದೆ.
ತಪಾಸಣೆಗೆ ಒಳಪಟ್ಟವರು ಪ್ರತ್ಯೇಕವಾಗಿ ಇರಲು ಸೂಚಿಸಲಾಗಿದೆ.
![](http://powercity.news/wp-content/uploads/2021/11/IMG_20211127_080507.jpg)
ಇನ್ನೂ 1822 ಜನರ ತಪಾಸಣಾ ವರದಿಗಳು ಬರಬೇಕಾಗಿದೆ ಎಂದು ಡಿಸಿ ನಿತೇಶ ಪಾಟೀಲ್ ತಿಳಿಸಿದ್ದಾರೆ.