ಸ್ಥಳೀಯ ಸುದ್ದಿ
ಕಲಘಟಗಿಯಲ್ಲಿ ಆಗಸ್ಟ್ 15 ರಂದು ನಡೆಯಲಿದೆ ತ್ರಿವರ್ಣ ಧ್ವಜದ ಜಾಥಾ
ಧಾರವಾಡ
ಮಾಜಿ ಸಚಿವ ಸಂತೋಷ ಲಾಡ್ ಫೌಂಡೇಶನನಿಂದ ಕಲಘಟಗಿಯಲ್ಲಿ ಆಗಸ್ಟ್ 15 ರಂದು ಬೃಹತ್ ತಿರಂಗಾ ಮೆರವಣಿಗೆ ನಡೆಯಲಿದೆ.
ಬರೋಬ್ಬರಿ 9 km ಉದ್ದ ಹಾಗೂ 9 ಅಡಿ ಅಗಲದ ರಾಷ್ಟ್ರಧ್ವಜ ಎಲ್ಲರ ಗಮನ ಸೆಳೆದು ಐತಿಹಾಸಿಕ ದಾಖಲೆ ಬರೆಯಲಿದೆ.
ಇದಕ್ಕಾಗಿ ಮಾಜಿ ಸಚಿವ ಸಂತೋಷ ಲಾಡ್ ಫೌಂಡೇಶನ್ ಎಲ್ಲಾ ರೀತಿಯ ಸಕಲ ಸಿದ್ಧತೆ ಮಾಡಿಕೊಂಡಿದೆ.
ಈ ಬಾರಿ ಆಗಸ್ಟ್ 15 ರ ಸ್ವಾತಂತ್ರ್ಯ ದಿನಾಚರಣೆ ಕಲಘಟಗಿ ಕ್ಷೇತ್ರದಲ್ಲಿ ತುಂಬಾನೆ ವಿಶೇಷ ಹಾಗೂ ವಿಭಿನ್ನವಾಗಿ ಆಚರಣೆ ಆಗಲಿದೆ.