ಸ್ಥಳೀಯ ಸುದ್ದಿ

ಕುಡಿಯುವ ನೀರಿನ ಜಾಕವೆಲ್ ಪರಿಶೀಲನೆ

ಧಾರವಾಡ

ಹುಬ್ಬಳ್ಳಿ ಧಾರವಾಡ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುವ ಮುಖ್ಯ ಅಮ್ಮಿನಭಾವಿ ಜಾಕವೆಲ್ ಗೆ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು ಭೇಟಿ ನೀಡಿ, ಎಲ್ ಅಂಡ್ ಟಿ ಅಧಿಕಾರಿಗಳು ಹಾಗೂ ಇನ್ನಿತರೊಂದಿಗೆ ಚರ್ಚಿಸಿ ಅವಳಿ ನಗರಗಳಿಗೆ ನೀರು ಸರಬರಾಜು ಮಾಡುತ್ತಿರುವ ಬಗ್ಗೆ ಸಮಗ್ರ ಮಾಹಿತಿಯನ್ನು ಪಡೆದ್ರು

ಕಳೆದು ಹತ್ತು ದಿನಗಳಿಂದ ಅವಳಿ ನಗರಗಳಿಗೆ ತುಂಬಾ ಕಡಿಮೆ ಪ್ರಮಾಣದಲ್ಲಿ ನೀರು ಸರಬರಾಜು ಆಗುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತುರ್ತಾಗಿ ಇದರ ಬಗ್ಗೆ ಕ್ರಮ ಜರುಗಿಸಲು ಹಾಗೂ ಪರಿಹಾರ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಮಹಾಪೌರರು ಸೂಚಿಸಿದರು.

ಈ ಸಂದರ್ಭದಲ್ಲಿ ಸಭಾ ನಾಯಕರಾದ ತಿಪ್ಪಣ್ಣ ಮಜ್ಜಗಿರವರು, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ವಿಜಯನಂದ ಶೆಟ್ಟಿ , ಪಾಲಿಕೆಯ ಆಯುಕ್ತರಾದ ಗೋಪಾಲಕೃಷ್ಣರವರು, ಕ್ವಾಲಿಟಿ ಸದಸ್ಯರಾದ ಶಂಭು ಸಾಲಿಮನಿ ರವರು, ಚಂದ್ರಶೇಖರ್ ಮನಗುಂಡಿ ರವರು, ಶ್ರೀಮತಿ ನೀಲಮ್ಮ ಅರಳದ, ಶ್ರೀಮತಿ ಸುನಿತಾ ಮಾಳವದಕರ, ಅನೇಕ ಎಲ್ ಅಂಡ್ ಟಿ ಅಧಿಕಾರಿಗಳು ಹಾಗೂ ಕೆ ಐ ಯು ಡಿ ಎಫ್ ಸಿ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button