ಸ್ಥಳೀಯ ಸುದ್ದಿ
ಕೇಂದ್ರ ಗೃಹ ಸಚಿವರಿಗೆ ಹುಬ್ಬಳ್ಳಿಯಲ್ಲಿ ಸನ್ಮಾನಿಸಿ ಗೌರವಿಸಿದ ಮೇಯರ್
ಧಾರವಾಡ
ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ನಡೆಯುತ್ತಿರುವ ಕಾರ್ಯಕ್ರಮಕ್ಕೆ ಹುಬ್ಬಳ್ಳಿಯ ಮೂಲಕ ತೆರಳುತ್ತಿರುವ ಕೇಂದ್ರ ಗೃಹಮಂತ್ರಿಗಳಾದ ಸನ್ಮಾನ್ಯ ಶ್ರೀ ಅಮಿತ್ ಷಾ ರವರನ್ನು ಇಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಮಹಾಪೌರರಾದ ಈರೇಶ ಅಂಚಟಗೇರಿ ರವರು, ಅಮೀತ್ ಶಾ ಅವರಿಗೆ ಕೇಸರಿ ಶಾಲನ್ನು ಹೊದಿಸುವ ಮೂಲಕ ಅವಳಿನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿದರು.
ಇದೇ ಸಂದರ್ಭದಲ್ಲಿ ಸನ್ಮಾನ್ಯರಿಗೆ ಜೈನ ಮುನಿಗಳಾದ ಶ್ರೀ ಅಜಿತಶೇಖರ ಸುರಜಿ ರವರಿಂದ ರಚಿಸಲ್ಪಟ್ಟ ದಿ ಕರ್ವ್ ಎಂಬ ಪುಸ್ತಕವನ್ನು ನೆನಪಿನ ಕಾಣಿಕೆಯಾಗಿ ಕೊಡಲಾಯಿತು.
ಈ ಸಂದರ್ಭದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ ಹಾಗೂ ಇದ್ದರು.