ಸ್ಥಳೀಯ ಸುದ್ದಿ

ಗೃಹಲಕ್ಷ್ಮಿ ಯೋಜನೆ ಸ್ತ್ರಿ ಸ್ವಾವಲಂಬನೆಯತ್ತ ಒಂದು ದಿಟ್ಟ ಹೆಜ್ಜೆ – ಶಾಸಕ‌ ವಿನಯ ಕುಲಕರ್ಣಿ

ಧಾರವಾಡ

ರಾಜ್ದಲ್ಲಿರುವ ಮಹಿಳೆಯರ ಆರ್ಥಿಕ ಸಬಲೀಕರಣದ ಉದ್ದೇಶದಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ತಲಾ 2000 ನೀಡುವ ಗೃಹಲಕ್ಷ್ಮಿ ಯೋಜನೆಯನ್ನು ಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದು,ಈಗಾಗಲೇ ಈ ಯೋಜನೆಯಡಿ ನೋಂದಾವನೆಯಾಗಿರುವ ಫಲಾನುಭವಿಗಳಿಗೆ ಇಂದು ದಿನಾಂಕ 30/08/2023 ರಂದು ಮೈಸೂರಿನಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಅನುಷ್ಠಾನಗೊಳಿಸಿದ್ದಾರೆ.

ಗೃಹಲಕ್ಷ್ಮಿ ಯೋಜನೆಗೆ ನನ್ನ ಕ್ಷೇತ್ರದಲ್ಲಿ 45503 ಪಲಾನುಭವಿಗಳು ನೋಂದಾಯಿಸಿದ್ದು 9 ಕೋಟಿ 10 ಲಕ್ಷದ 6 ಸಾವಿರ ರೂಪಾಯಿ ಬಿಡುಗಡೆ ಮಾಡಲಾಗಿದೆ.

ಚುನಾವಣೆ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆಗಳ ಮೂಲಕ ಜನರ ಮನಗೆದ್ದಿರುವ ಕಾಂಗ್ರೆಸ ಸರ್ಕಾರ ನುಡಿದಂತೆ ನಡೆಯುತ್ತಿದೆ ಎಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿ ಪ್ರಕಟಣೆ ಮೂಲಕ ಸಂತಸ ವ್ಯಕ್ತಪಡಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಪೈಕಿ ಇಂದು, ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದ ಹೆಬ್ಬಳ್ಳಿಯಲ್ಲಿ ಗೃಹಲಕ್ಷ್ಮಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದ್ದು, ನನ್ನ ಧಾರವಾಡ ಗ್ರಾಮೀಣ 71ನೇ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಇಂದು 45503 ಫಲಾನುಭವಿಗಳು ಗೃಹಲಕ್ಷ್ಮಿ ಯೋಜನೆ ಲಾಭ ಪಡೆದಿದ್ದಾರೆ ಎಂದರು.

ಒಟ್ಟು ಧಾರವಾಡ ಗ್ರಾಮೀಣ 71 ಕ್ಷೇತ್ರದಲ್ಲಿ ಫಲಾನುಭವಿಗಳಿಗೆ .9,10,06,000.(ಒಂಬತ್ತು ಕೋಟಿ ಹತ್ತು ಲಕ್ಷ ಆರು ಸಾವಿರ ) ರೂಪಾಯಿಗಳು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗಿದೆ.


ಈ ಯೋಜನೆಯ ಲೋಕಾರ್ಪಣೆ ಕಾರ್ಯಕ್ರಮವನ್ನು ವೀಕ್ಷಿಸಲು ಧಾರವಾಡ ಜಿಲ್ಲಾಯಾದ್ಯಂತ 173 ಸ್ಥಳಗಳಲ್ಲಿ ಟಿ ವಿ ,ಎಲ್ ಇಡಿ ಪರದೆ ವ್ಯವಸ್ಥೆ ಮಾಡಿದ್ದು,ಧಾರವಾಡ ಜಿಲ್ಲೆಯ ವ್ಯಾಪ್ತಿಯಲ್ಲಿ ಒಟ್ಟು 145 ಗ್ರಾಮ ಪಂಚಾಯತಿಗಳು,ಹು-ಧಾ ಮಹಾನಗರಪಾಲಿಕೆಯ 82 ವಾರ್ಡಗಳು ಹಾಗೂ 5 ಪಟ್ಟಣ ಪಂಚಾಯ್ತಿಗಳನ್ನು ಸೇರಿಸಲಾಗಿದೆ.

ಒಟ್ಟು ಜಿಲ್ಲೆಯಾದ್ಯಂತ 404848 ಪಡಿತರ ಕಾರ್ಡುಗಳನ್ನು ಹೊಂದಿದ್ದು ಅದರಲ್ಲಿ ಈವರೆಗೆ 339305 ಪಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು ಇಂದು ಈ ಕಾರ್ಯಕ್ರಮದ ಲೋಕಾರ್ಪಣೆ ಸಮಯದಲ್ಲಿ, ನಮ್ಮ ಧಾರವಾಡ ಜಿಲ್ಲೆಯಲ್ಲಿ 82452 ,ಫಲಾನುಬವಿಗಳಿಗೆ ಒಟ್ಟು 16494000 ರೂಗಳನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ ಖಾತೆಗೆ ವರ್ಗಾಯಿಸಲಾಗಿದೆ
ಎಂದು ಶಾಸಕ ವಿನಯ ಕುಲಕರ್ಣಿ ಪ್ರಕಟಣೆ ಮೂಲಕ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button