ಧಾರವಾಡ
ಗ್ರಾಮ ದೇವಿ ಜಾತ್ರೆ ಸಂಭ್ರಮ
ಧಾರವಾಡ
ಶತಮಾನದ ಇತಿಹಾಸವನ್ನು ಹೊಂದಿರುವಂತಹ ಧಾರವಾಡದ ಕಸಬಾ ಗ್ರಾಮ ದೇವಿ ಜಾತ್ರಾಮಹೋತ್ಸವ ನಡೆಯುತ್ತಿದ್ದು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಧರ್ಮಪತ್ನಿ ಶ್ರೀಮತಿ ಶಿವಲೀಲಾ ಕುಲಕರ್ಣಿಯವರು ಕಸಬಾ ಗ್ರಾಮದೇವಿಯ ದಂತಹ ದ್ಯಾಮವ್ವ ದುರ್ಗಮ್ಮ ತಾಯಿಗೆ ಉಡಿ ತುಂಬುವುದರ ಮೂಲಕ ತಮ್ಮ ಭಕ್ತಿಸೇವೆಯನ್ನು ಅರ್ಪಿಸಿದರು.
ಕಾಂಗ್ರೆಸ್ನ ನೂರಾರು ಕಾರ್ಯಕರ್ತರು ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಧರ್ಮಪತ್ನಿ ಶಿವಲೀಲಾ ವಿನಯ್ ಕುಲಕರ್ಣಿ ಅವರಿಗೆ ಸಾಥ್ ನೀಡಿದರು. ಅದರಂತೆ ಯುವ ಮುಖಂಡರು ಆದಂತಹ ಮಂಜುನಾಥ ನಡಟ್ಟಿ, ಅರವಿಂದ್ ಏಗನಗೌಡರ ಸೇರಿದಂತೆ ಕಾಂಗ್ರೆಸ್ನ ಕಾರ್ಯಕರ್ತರು ಈ ಸಂದರ್ಭದಲ್ಲಿ ಇದ್ದರು.