Jannah Theme License is not validated, Go to the theme options page to validate the license, You need a single license for each domain name.
ರಾಜ್ಯ

ಮಹಿಳೆ ಕೊರಳಲ್ಲಿನ ಐದು ತೊಲೆ ಚಿನ್ನಾಭರಣ ದೊಚಿದ ಖದೀಮರು…..

ಬೀದರ್

ಬಸವಕಲ್ಯಾಣ ನಗರದ ಮುಖ್ಯರಸ್ತೆಯಲ್ಲಿ ನಡೆದುಕೊಂಡು ಹೊಗುತಿದ್ದ ಅಂಗನವಾಡಿ ಶಿಕ್ಷಕಿಯೊಬ್ಬರ ಕೊರಳಲ್ಲಿನ ಐದು ತೊಲೆ ಚಿನ್ನಾಭರಣ ಕಳವು ಮಾಡಿದ ಘಟನೆ ನಗರದ ತ್ರಿಪುರಾಂತನಲ್ಲಿ ನಡೆದಿದೆ.

ನಗರದ ವಿದ್ಯಾಶ್ರೀ ಕಾಲನಿ ನಿವಾಸಿ ವಿಜಯಕುಮಾರಿ ನೇತೆ ಚಿನ್ನಾಭರಣ ಕಳೆದುಕೊಂಡ ಶಿಕ್ಷಕಿಯಾಗಿದ್ದಾರೆ.

ನಗರದಲ್ಲಿ ಕಾರ್ಯಕ್ರಮವೊಂದನ್ನು ಮುಗಿಸಿಕೊಂಡು ತನ್ನ ಸಹೋದರಿ ಜೋತೆಗೆ ನಡೆದುಕೊಂಡು ಮನೆಗೆ ತೆರಳುತಿದ್ದಾಗ ತ್ರಿಪುರಾಂತನ ಬುನಕರ್ ಕಾಲನಿ ಬಳಿ ಬೈಕ್ ಮೇಲೆ ಬಂದ ಇಬ್ಬರು ಅಪರಿಚಿತ ಖದೀಮರು ಕೊರಳಲಿದ್ದ 2.40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿಕೊಂಡು ನಾಪತ್ತೆಯಾಗಿದ್ದಾರೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಈ ಬಗ್ಗೆ ಬಸವಕಲ್ಯಾಣ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…..

Related Articles

Leave a Reply

Your email address will not be published. Required fields are marked *