ಸ್ಥಳೀಯ ಸುದ್ದಿ

ಟ್ಯೂಶನಗೆ ಹೋಗದೇ 99.04% ಅಂಕ ಪಡೆದ ವಿದ್ಯಾರ್ಥಿ

ಧಾರವಾಡ

ಧಾರವಾಡದ ಕಲ್ಯಾಣನಗರದ ಪ್ರತಿಭೆ, ಪವನ ಇಂಗ್ಲೀಷ ಮೀಡಿಯಂ ಶಾಲೆ ವಿದ್ಯಾರ್ಥಿಯೊಬ್ಬ ಯಾವುದೇ ಟ್ಯೂಶನಗೆ ಹೋಗದೇ 99.04% ಅಂಕ ಪಡೆದು ಸಾಧನೆ ಮಾಡಿದ್ದಾನೆ.

ಶ್ರೇಯಸ್ ಶ್ರೀನಿವಾಸ ಪಾಟೀಲ ಎನ್ನುವ ವಿದ್ಯಾರ್ಥಿ ಈ ಸಾಧನೆ ಮಾಡಿದ್ದು, ಕಲ್ಯಾಣನಗರದಲ್ಲಿರುವ
ಪೂರ್ಣ ಪ್ರಜ್ಞಾ ಅಪಾರ್ಟ್ಮೆಂಟ ನಿವಾಸಿಯಾಗಿದ್ದಾನೆ.

ತಂದೆ ಶ್ರೀನಿವಾಸ ಪಾಟೀಲ, ಖಾಸಗಿ ಉದ್ಯೋಗಿಯಾಗಿದ್ದು,
ತಾಯಿ ದೀಪಾ ಪಾಟೀಲ, ಗೃಹಿಣಿಯಾಗಿದ್ದಾರೆ.
ಸಹೋದರ ರಾಘವೇಂದ್ರ ಪಾಟೀಲ್ ಬಿ.ಕಾಮ್ ಕೊನೆಯ ವರ್ಷ ಓದುತ್ತಿದ್ದಾನೆ.

ಪ್ರತಿ ಶತ 99.04% ( ಗಳಿಸಿದ ಅಂಕಗಳು 619) ಸಾಧನೆ ಮಾಡುವ ಮೂಲಕ ಪೋಷಕರಿಗೆ ಹೆಮ್ಮೆ ತರುವ ಕೆಲಸ ಮಾಡಿದ್ದಾನೆ.

ಯಾವುದೇ ಟ್ಯೂಷನ್ ಗೇ ಹೋಗದೇ ತನ್ನ ಪರಿಶ್ರಮ ದಿಂದ ಈ ಯಶಸ್ಸನ್ನು ಪಡೆದಿದ್ದಾನೆ.

ಇವನ ಯಶಸ್ಸಿಗೆ ಅವನ ಸತತ ಪರಿಶ್ರಮ ,ಪವನ ಶಾಲೆಯ ಶಿಕ್ಷಕ ವೃಂದ ಹಾಗೂ ಅಡಳಿತ ಮಂಡಳಿ ಕಾರಣ. ಅನೀಲ ದೇಶಪಾಂಡೆ ಸರ್ ಅವರ ಸತತ ಪ್ರೋತ್ಸಾಹ ಹಾಗೂ ಮಾರ್ಗದರ್ಶನ . ಅವರೆಲ್ಲರಿಗೂ ನಮ್ಮ ಹೃದಯ ಪೂರ್ವಕ ಧನ್ಯವಾದಗಳು ಎಂದು ಪೋಷಕರು ಸಂತೋಷವನ್ನು ಹಂಚಿಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button