ಠಾಣೆಯಲ್ಲೇ ಜಡೆ ಜಗಳ: ಇದು ಬಡ್ಡಿ ವ್ಯವಹಾರ!

powercity news:
ಹುಬ್ಬಳ್ಳಿ
ಮಿಟರ್ ಬಡ್ಡಿ ದಂಧೆಗೆ ರೊಷಿಹೊಗಿದ್ದ ಕುಟುಂಬ ವೊಂದು ರಕ್ಷಣೆ ಕೊರಿ ಅವಳಿನಗರದ ಪೊಲಿಸ್ ಆಯುಕ್ತರ ಬಳಿ ತಮ್ಮ ಅಸಹಾಯಕತೆಯನ್ನು ತೊಡಿಕೊಂಡಿದ್ದರು.
ಅದರಂತೆ ಆಯುಕ್ತರು ಅವರ ಸಮಸ್ಯೆಗೆ ಸ್ಪಂದಿಸಿ ಸಂಬಂಧ ಪಟ್ಟ ಠಾಣೆಗೆ ತೆರಳಿ ದೂರು ನೀಡುವಂತೆ ಸೂಚಿಸಿದ್ದರು.

ಇವೇಳೆ ಹಳೆ ಹುಬ್ಬಳ್ಳಿ ಪೊಲಿಸ್ ಠಾಣೆಗೆ ದೂರು ಕೊಡಲು ಬಂದಿದ್ದ ಮಹಿಳೆಯು ಘಟನೆಯ ಕುರಿತು ಪೊಲಿಸರಿಗೆ ಮಾಹಿತಿ ನಿಡುತ್ತಿದ್ದರು.
ಇದೆವೇಳೆಗೆ ಅಶ್ವಿನಿ ಹಾಗೂ ಅಚ್ಚು ಎಂಬ ಇಬ್ಬರು ಠಾಣೆಯಲ್ಲೇ ಮಹಿಳೆಯ ಮೇಲೆ ಹಲ್ಲೆಗೆ ಮುಂದಾಗಿದ್ದಲ್ಲದೆ ಆಕೆಯ ಬಳಿ ಇದ್ದ ಮೋಬೈಲ್ ಕೂಡ ಕಸಿದು ಕೊಂಡು ಬೆದರಿಕೆಯೊಡ್ಡಲು ಮುಂದಾಗಿದ್ದಾರೆ.
ಘಟನೆ ವೇಳೆ ತಮ್ಮ ಕಚೇರಿಯಲ್ಲಿದ್ದ ಹಳೆಹುಬ್ಬಳ್ಳಿ ಪೊಲಿಸ್ ಇನ್ಸ್ಪೆಕ್ಟರ್ ಹೊರಬಂದಾಗಲೆ ಗಲಾಟೆ ಶಮನ ಗೊಂಡಿದೆ.
ಅಲ್ಲದೆ ಅಶ್ವಿನಿ ಜೊತೆಗೆ ರಾಜನಗರದ ನಿವಾಸಿ ಬಾಡಿ ಬಿಲ್ಡರ್ ಅಚ್ಚು ಎಂಬ ಯುವತಿಯ ವರ್ತನೆಯಂತು ಯಾವುದೆ ರೌಡಿಗಳಿಗಿಂತ ಕಡಿಮೆ ಇರಲಿಲ್ಲ.
ಹಾಗಾದ್ರೆ ತನಗಾದ ಅನ್ಯಾಯ ವನ್ನು ಕಾನೂನಿನ ಗಮನಕ್ಕೆ ತರುವುದು ತಪ್ಪೆ. ಅಥವಾ ಪೊಲಿಸರು ಇಂಥಹ ರೌಡಿ ಪ್ರವೃತ್ತಿ ಬಡ್ಡಿ ದಂಧೆಕೊರರ ಮೇಲೆ ಕ್ರಮ ಗೊಳ್ಳದಿರುವುದರ ಸಲುಗೆಯೆ? ಆಯುಕ್ತರು ಇ ಕಡೆ ಗಮನಿಸಬೆಕಿದೆ.
