ಸ್ಥಳೀಯ ಸುದ್ದಿ

ದೇಶದಲ್ಲಿ ‌ಶೀಘ್ರವೇ ಹೀಟ್ಲರ್ ಆಡಳಿತ ಬರಲಿದೆ – ಶಾಸಕ ವಿನಯ ಕುಲಕರ್ಣಿ ‌

ಕಿತ್ತೂರು

ಕಿತ್ತೂರಿನಲ್ಲಿ ಧಾರವಾಡ ಗ್ರಾಮೀಣ ಶಾಸಕ‌ ವಿನಯ ಕುಲಕರ್ಣಿ ಮಾತನಾಡಿ, ದೇಶದಲ್ಲಿ ಹೀಟ್ಲರ್ ಪದ್ಧತಿ ಶೀಘ್ರದಲ್ಲೇ ಬರುವುದರಲ್ಲಿ ಸಂಶಯವೇ ಇಲ್ಲಾ ಎಂದರು.

ಯಾರಾದ್ರೂ ಕೇಂದ್ರ ಸರ್ಕಾರ ಬಗ್ಗೆ‌ ಮಾತನಾಡಿದ್ರೆ‌ ಜೈಲಿಗೆ ಹಾಕ್ತಾರೆ.‌
ರಾಜ್ಯ ಸರ್ಕಾರ ಟ್ಯಾಕ್ಸ್ ಪೇ ಮಾಡುವುದರಲ್ಲಿ ದೇಶದಲ್ಲಿಯೇ 2 ನೇ ಸ್ಥಾನದಲ್ಲಿದೆ. ಆದ್ರೆ ಕೇಂದ್ರದಿಂದ ನಮಗೆ ಬರುವ ಅನುದಾನ 0 ಆಗಿದೆ.
ಆದ್ರೂ ನಮಗೆ ಅಕ್ಕಿಕೊಡಲಿಕ್ಕೆ ಆಗ್ತಿಲ್ಲಾ ಎಂದು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ಮಾಡಿದ್ರು.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 1300 ಮನೆಗಳು ಬಿದ್ದಿವೆ.
ಬಹಳಷ್ಟು ಮಂದಿ‌ಗುಡಿಸಲು ಹಾಗೂ ದೇವಸ್ಥಾನ‌ ಅಂಗನವಾಡಿಗಳಲ್ಲಿ ವಾಸವಾಗಿದ್ದಾರೆ.

ಈ‌ ಬಗ್ಗೆ‌ ಸದನದಲ್ಲಿ ಮಾತನಾಡಿರುವೆ, ಅವರಿಗೆ ಪರಿಹಾರ ಕೊಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ರಿಸರ್ವೇ ಮಾಡಿ‌ ಕ್ರಮ ಕೈಗೊಳ್ಳಲಾಗುವುದು ಎಂದರು.

ಎಲ್ & ಟಿ ಯ ಅಧಿಕಾರಿಗಳ ಸಭೆ ನಡೆಸಿ ಶಾಸಕರು‌ ಮಾತನಾಡಿದ ಶಾಸಕರು, 24×7 ನೀರು ನೀಡುವ ಕುರಿತು ಮಾಹಿತಿ ಪಡೆದು ಕೂಡಲೇ ಮಾಹಿತಿ ನೀಡಬೇಕು.

ಕೆಲಸಗಳು ಶೀಘ್ರದಲ್ಲಿಯೇ ಕಾರ್ಯಗತವಾಗಬೇಕು.ನೀರು ಬಿಡುವ ಸಮಯವನ್ನು ರಾತ್ರಿ 12 ಗಂಟೆಯ ನಂತರ ಬಿಡುವ ಬದಲು, ಬೆಳಿಗ್ಗೆ ಕುಡಿಯುವ ನೀರು ಬಿಟ್ಟು ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ತಿಳಿಸಿದರು.

Related Articles

Leave a Reply

Your email address will not be published. Required fields are marked *

Back to top button