ಸ್ಥಳೀಯ ಸುದ್ದಿ

ಧಾರವಾಡಕ್ಕೆ ಕೇಂದ್ರ ಸರ್ಕಾರದ ಮತ್ತೊಂದು ಕೊಡುಗೆ

ಧಾರವಾಡ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರ ಕಾಳಜಿ ಹಾಗೂ ಅಭಿವೃದ್ಧಿ ಪರ ದೃಷ್ಟಿಕೊನ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಗೆ ಅದರಲ್ಲೂ ಹುಬ್ಬಳ್ಳಿ ಧಾರವಾಡ ಅವಳಿ ಮಹಾನಗರಕ್ಕೆ ಭರಪೂರ ಯೋಜನೆಗಳು ಸಿಗುತ್ತಿವೆ.

ಇತ್ತೀಚಿಗಷ್ಟೇ ದೇಶದ 9 ನೇ FSl ಯುನಿವರ್ಸಿಟಿ ಕ್ಯಾಂಪಸ್ ಧಾರವಾಡದಲ್ಲಿ ಕೇಂದ್ರ ಗೃಹ ಸಚಿವ ಅಮೀತ ಶಾ ಮಾಡಿದ್ದರು.

ಇದೀಗ ಮತ್ತೊಂದು ಅಭಿವೃದ್ಧಿಯ ಯೋಜನೆ ಧಾರವಾಡ ನಗರಕ್ಕೆ ಸಿಕ್ಕಿದೆ.

ಕೇಂದ್ರ ಸರ್ಕಾರದ ಲಲಿತಕಲಾ ಅಕಾಡೆಮಿ ಪ್ರಾದೇಶಿಕ ಕೇಂದ್ರ ಧಾರವಾಡದಲ್ಲಿ ನಿರ್ಮಾಣವಾಗಲಿದೆ.

ಇದಕ್ಕಾಗಿ ಕೇಂದ್ರ ಸಚಿವರು ಶೀಘ್ರದಲ್ಲೇ ಭೂಮಿ ಪೂಜೆ ಮಾಡಲಿದ್ದಾರೆ.

ಭೂಮಿ ಪೂಜೆಯನ್ನು ನೆರವೇರಿಸಲು 20/02/2023 ರ ಸೋಮವಾರದಂದು ಧಾರವಾಡದ ಕೋರ್ಟ್ ವೃತ್ತದಲ್ಲಿರುವ ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಾದೇಶಿಕ ಆವರಣಕ್ಕೆ ಕೇಂದ್ರ ಕಲ್ಲಿದ್ದಲು ಗಣಿ ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಸನ್ಮಾನ್ಯ ಶ್ರೀ ಪ್ರಹ್ಲಾದ ಜೋಶಿ ರವರು ಹಾಗೂ ಕೇಂದ್ರ ಸಂಸದೀಯ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರಾದ ಶ್ರೀ ಅರ್ಜುನ್ ರಾಮ್ ಮೇಘವಾಲ್ ರವರು ಆಗಮಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೌರರಾದ ಈರೇಶ ಅಂಚಟಗೇರಿ ರವರು ಪೂರ್ವಭಾವಿ ಸಭೆ ನಡೆಸಿ, ಸ್ಥಳ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮಾನ್ಯ ಕೇಂದ್ರ ಸಚಿವರ ಅಪರ ಕಾರ್ಯದರ್ಶಿಗಳಾದ ಮುರಳೀಧರ ಮಳಗಿ ರವರು, ಮೋಹನ ಬೇಸ್ಮೀರವರು, ಬಿಜೆಪಿ ಜಿಲ್ಲಾಧ್ಯಕ್ಷರಾದ ಸಂಜಯ ಕಪಟಕರ, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ವಿಜಯಾನಂದ ಶೆಟ್ಟಿ, ಸುರೇಶ ಬೆದರೇ,
ಸುನಿಲ ಮೋರೆ ರವರು, ಕುಮಾರ ಬೆಕ್ಕೇರಿ, ಲಲಿತಕಲಾ ಅಕಾಡೆಮಿಯ ಸಂಚಾಲಕರಾದ ಶ್ರೀನಿವಾಸ ಶಾಸ್ತ್ರಿರವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *