ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಮನೆಮಾತಾದ ಸ್ನೇಕ್ ರೆಸ್ಕ್ಯೂ ಟೀಂ
ಧಾರವಾಡ
ಕಳೆದ 10 ವರ್ಷಗಳಿಂದ ಹಾವು ಹಿಡಿಯುವ ಮೂಲಕ ಜನರ ಆತಂಕ ದೂರ ಮಾಡುವ ಜೆಕೆ ಸರ್ಕಾರ ರೆಸ್ಕ್ಯೂ ಟೀಂ ಧಾರವಾಡದಲ್ಲಿ ಮನೆ ಮಾತಾಗಿದೆ.
ಮನೆಯಲ್ಲಿ ಹಾವು ಬಂದಿದೆ ಎಂದು ಫೋನ ಮಾಡಿದ್ರೆ ಸಾಕು ಕೆವಲ 15 ರಿಂದ 20 ನಿಮಿಷದಲ್ಲಿ ಹಾವು ಹಿಡಿದು ಜನರ ಪ್ರಾಣ ರಕ್ಷಣೆ ಮಾಡ್ತಾರೆ.
ಸೋಮು, ತಿಪ್ಪಣ್ಣ, ಮಂಜು, ಜಿಲಾನಿ, ಯುವಕರ ತಂಡ ಹಾವು ಹಿಡಿಯುವುದರ ಜೋತೆಗೆ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದಾರೆ.
ಇಂದು ಸಹ ಯಾದವಾಡ ಗ್ರಾಮದಲ್ಲಿ
ರುದ್ರಪ್ಪ ಕೊಯಪ್ಪನವರ ಎನ್ನುವನ ರೈತನ ಮನೆಯಲ್ಲಿ ಹಾವು ಪ್ರತ್ಯಕ್ಷವಾಗಿದೆ. ತಕ್ಷಣ ಜೆಕೆ ಸರ್ಕಾರ ರೆಸ್ಕ್ಯೂ ಟೀಂ ಇದಕ್ಕೆ ಸ್ಪಂದನೆ ಮಾಡಿ, ಹಾವು ಹಿಡಿದು ಕಾಡಿಗೆ ಬಿಟ್ಟು ಬಂದಿದ್ದಾರೆ.