ಸ್ಥಳೀಯ ಸುದ್ದಿ
ಧಾರವಾಡದಲ್ಲಿ ಶುರುವಾಗಿದೆ ಬೈಕ್ ಕಳ್ಳರ ಹಾವಳಿ

ಧಾರವಾಡ
ಹೌದು ಧಾರವಾಡ ನಗರದಲ್ಲಿ ಬೈಕ್ ಕಳ್ಳರ ಹಾವಳಿ ಹೆಚ್ಚಾಗಿದೆ.
ಧಾರವಾಡ ನಗರದಲ್ಲಿ 3 ಪೊಲೀಸ ಠಾಣೆ ವ್ಯಾಪ್ತಿಗಳು ಹಾಗೂ 1 ಎಸಿಪಿ ಕಚೇರಿ ಇದ್ದರೂ ಕೂಡ ಬೈಕ್ ಕಳ್ಳರ ಹಾವಳಿ ಜೋರಾಗಿಯೇ ಇದೆ.

ಆದ್ರೆ ಇದಕ್ಕೆ ಪೊಲೀಸರು ಮಾತ್ರ ಖ್ಯಾರೆ ಎನ್ನದೇ ಇರುವುದು ಹಲವಾರು ಅನುಮಾನಕ್ಕೆ ಕಾರಣವಾಗಿದೆ.

ಉಪನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿಯೇ ಇತ್ತೀಚೆಗೆ 2 ಬೈಕ ಕಳುವಾಗಿವೆ.
ಜಿಲ್ಲಾ ಆಸ್ಪತ್ರೆ ಮುಂದೆ ಇದ್ದ ಕಪ್ಪು ಬಣ್ಣದ ಸ್ಪ್ಲೆಂಡರ್ ಬೈಕ್ ಹಾಗೂ ಶ್ರೀಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಪಲ್ಸರ್ 200 ಕಳ್ಳತನವಾಗಿದೆ.
ಇದಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಾಹಿತಿಯನ್ನು ಕೊಡಲಾಗಿದೆ. ಆದ್ರೂ ಪೊಲೀಸರು ಮಾತ್ರ ನೋಡುತ್ತೇವೆ ಮಾಡುತ್ತೇವೆ ಎನ್ನುವ ಮೂಲಕ ಸುಮ್ಮನಾಗಿದ್ದು ಮಾತ್ರ ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.