ಧಾರವಾಡ ಗ್ರಾಮೀಣ 71 ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೊಂದಲ
ಧಾರವಾಡ
ಬಸವರಾಜ ಕೊರವರ್ ಮೇಲೆ ನಿಂತಿದೆ ಬಿಜೆಪಿ ಅಭ್ಯರ್ಥಿ ಭವಿಷ್ಯ ಇಂತಹದೊಂದು ಚರ್ಚೆ ಧಾರವಾಡ ಗ್ರಾಮೀಣ ಕ್ಷೇತ್ರದ ಜನರಲ್ಲಿ ಮೂಡಿದೆ.
ಬಸವರಾಜ ಕೊರವರ್ ಜನಜಾಗೃತಿ ಸಂಘದ ಅಧ್ಯಕ್ಷರಾಗಿ ಜನಸೇವೆಗೆ ಮುಡುಪಾಗಿದ್ದವರು. ಜನರಿಗೆ ಒಳಿತನ್ನು ಮಾಡುವ ಜನನಾಯಕನ ಆಯ್ಕೆ ಮಾಡುವುದೇ ಇವರ ಉದ್ದೇಶವಾಗಿದೆ.
ಕ್ಷೇತ್ರದಲ್ಲಿ ಸುಮಾರು 25 ಸಾವಿರಕ್ಕಿಂತ ಹೆಚ್ಚು ಮತದಾರರ ಜೋತೆಗೆ ನಿಕಟ ಸಂಪರ್ಕ ಹೊಂದಿರುವ ಬಸವರಾಜ ಕೊರವರ್ ತಾವು ಕೂಡ ಪಕ್ಷೇತರ ಅಭ್ಯರ್ಥಿಯಾಗಿ ನಿಲ್ಲುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇತ್ತೀಚಿಗೆ ಮಾಜಿ ಶಾಸಕಿ ಸೀಮಾ ಮಸೂತಿ ಮನೆಯಲ್ಲಿ ನಡೆದ ಆ ಮಹತ್ವದ 1 ವರೆ ಗಂಟೆಗಳ ಸಭೆಯಲ್ಲಿ ಬಸವರಾಜ ಕೊರವರ್ ತಮ್ಮ ನಿಲುವು ವ್ಯಕ್ತ ಪಡಿಸಿದ್ದಾರೆ.
ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಹಾಲಿ ಶಾಸಕರ ಬಗ್ಗೆ ಸಭೆಯಲ್ಲಿ ವಿರೋಧ ವ್ಯಕ್ತವಾಯಿತು.
ಈ ಸಂದರ್ಭದಲ್ಲಿ ಗ್ರಾಮೀಣ ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳಾದ ತವನಪ್ಪ ಅಷ್ಟಗಿ, ಸವಿತಾ ಅಮರಶೆಟ್ಟಿ, ಮಾಜಿ ಶಾಸಕಿ ಸೀಮಾ ಮಸೂತಿ, ಬಸವರಾಜ ಕೊರವರ್ ಭಾಗಿಯಾಗಿದ್ದು, ಎಲ್ಲರೂ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.
ಹಾಲಿ ಶಾಸಕರಿಗೆ ಟಿಕೆಟ್ ಬೇಡವೇ ಬೇಡ ಎನ್ನುವ ನಿರ್ಣಯಕ್ಕೆ ಒಮ್ಮತದಿಂದ ಸಭೆಯಲ್ಲಿ ಭಾಗಿಯಾದವರು ಚರ್ಚಿಸಿದ್ದಾರೆ.
ಈ ವೇಳೆ ಬಸವರಾಜ ಕೊರವರ್ ಮಾತನಾಡಿ, ಹಾಲಿ ಶಾಸಕರಿಗೆ ಟಿಕೆಟ್ ಕೊಟ್ಟಿದ್ದೇ ಆದ್ದಲ್ಲಿ, ತಾವು ಪಕ್ಷೇತರನಾಗಿ ಚುನಾವಣೆಗೆ ನಿಂತು ತಮ್ಮ ವರ್ಚಸ್ಸು ತೋರಿಸುವುದಾಗಿ ಹೇಳಿ ಹೋಗಿದ್ದಾರೆ.
ಅದೇನೆ ಆಗಲಿ ಧಾರವಾಡ ಗ್ರಾಮೀಣ ಭಾಗದಲ್ಲಿ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಅನ್ನುವದಕ್ಕಿಂತ ಬಸವರಾಜ ಕೊರವರ್ ಅವರ ನಿಲುವು ಸ್ಪಷ್ಟವಾಗಲಿದ್ದು, ಮಹತ್ವದ ಹಾಗೂ ನಿರ್ಣಾಯಕ ಪಾತ್ರ ವಹಿಸಲಿದ್ದಾರೆ.