ಸ್ಥಳೀಯ ಸುದ್ದಿ

ಧಾರ್ಮಿಕ ಕ್ಷೇತ್ರಗಳ ಅಭಿವೃದ್ಧಿಗೆ ಶಾಸಕ ಅಮೃತ ದೇಸಾಯಿ ಕೊಡುವೆ ಅಪಾರ


ಧಾರವಾಡ

ಗರಗದ ಶ್ರೀ ಗುರು ಮಡಿವಾಳೇಶ್ವರ ಕಲ್ಮಠದ ಗುರು ಮಠದ ನಿರ್ಮಾಣ ಕಾಮಗಾರಿಗೆ ಗರಗದ ಶ್ರೀಗಳಾದ ಮನಿಪ್ರ ಶ್ರೀ ಚನ್ನಬಸವ ಸ್ವಾಮಿಗಳು ಹಾಗೂ ಉಪ್ಪಿನಬೇಟಗೆರಿ ಶ್ರೀಗಳಾದ ಮನಿಪ್ರ ಶ್ರೀ ಕುಮಾರ ವಿರೂಪಕ್ಷೇಶ್ವರ ಶ್ರೀ ಮೂರುಸಾವಿರ ವಿರಕ್ತಮಠ ಉಪ್ಪಿನ ಬೆಟಗೇರಿ ಇವರ ದಿವ್ಯ ಹಸ್ತದಿಂದ ಇಂದು ಅಡಿಗಲ್ಲು ಮತ್ತು ಪೂಜೆಯ ಮೂಲಕ ದೇವಸ್ಥಾನದ ನಿರ್ಮಾಣ ಕಾಮಗಾರಿಗೆ ಮಂಗಳವಾರ ಚಾಲನೆ ನೀಡಲಾಯಿತು.


ಕರ್ನಾಟ ರಾಜ್ಯ ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ 180 ಲಕ್ಷ ಅನುದಾನದಲ್ಲಿ ಭವ್ಯವಾಗಿ ದೇವಸ್ಥಾನ ನಿರ್ಮಾಣ ಕಾಮಗಾರಿ ನಡೆಯಲಿದೆ.
ಈ ವೇಳೆ ಉಭಯ ಶ್ರೀಗಳು ಮಾತನಾಡಿ, ಪುರಾತನ ಇತಿಹಾಸವನ್ನು ಹೊಂದಿರುವ ಗರಗದ ಶ್ರೀಮಠವು ಅಸಂಖ್ಯಾತ ಭಕ್ತ ಸಮೂಹವನ್ನು ಒಳಗೊಂಡಿದೆ. ಗರಗ ಶ್ರೀಮಠದ ಅಭಿವೃದ್ಧಿಗೆ ಕಂಕಣ ಬದ್ಧರಾಗಿ ನಿಂತಿರುವ ಧಾರವಾಡದ ನೆಚ್ಚಿನ ಶಾಸಕರಾದ ಅಮೃತ ದೇಸಾಯಿಯವರು ಧಾರ್ಮಿಕ ಕ್ಷೇತ್ರಗಳ ಬಗ್ಗೆ ಅಪಾರ ಕಾಳಜಿ ಹೊಂದಿರುವುದು ಹೆಮ್ಮೆಯ ಸಂಗತಿಯಾಗಿದೆ. ಗರಗ ಮಡಿವಾಳೇಶ್ವರ ಆಶೀರ್ವಾದ ಎಲ್ಲರ ಭಕ್ತರ ಮೇಲೆ ಸದಾಕಾಲ ಇರಲಿ ಎಂದು ಪ್ರಾರ್ಥಿಸಿದರು.

ಈ ಸಂಧರ್ಭದಲ್ಲಿ ಮಾಜಿ ಶಾಸಕರಾದ ಶ್ರೀ ಅಯ್ಯಪ್ಪ ದೇಸಾಯಿ, ಮಹೇಶ ಯಲಿಗಾರ, ಸತೀಶ ಶಟೋಜಿ, ದಯಾನಂದಗೌಡ ಪಾಟೀಲ್, ಅರವಿಂದಗೌಡ ಪಾಟೀಲ, ಮಡಿವಾಳಪ್ಪ ಪೆಂಡಾರಿ, ವಿಠ್ಠಲ ಪೂಜಾರ, ರಾಜು ಕಟ್ಟಿಮನಿ, ಗರಗ ಮತ್ತು ಹಂಗರಕಿ ಗ್ರಾ ಪಂ ಅದ್ಯಕ್ಷರು ಹಾಗೂ ಸದಸ್ಯರು ಮತ್ತು ಗ್ರಾಮದ ಗುರು ಹಿರಿಯರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button