ಸ್ಥಳೀಯ ಸುದ್ದಿ

ನೂರಾರು ಸಸಿಗಳನ್ನು ನೆಟ್ಟು, ವಿಶ್ವಪರಿಸರ ದಿನಕ್ಕೆ ಮೆರಗು‌ ತಂದ ಹೆಬ್ಬಳ್ಳಿಯ ಪಂಚಾಯತ ಸದಸ್ಯರು.

ಹೆಬ್ಬಳ್ಳಿ

ಧಾರವಾಡ ತಾಲೂಕಿನ ಹೆಬ್ಬಳ್ಳಿ ಗ್ರಾಮದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ, ಹೆಬ್ಬಳ್ಳಿಯ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಒಬಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ , ಮಂಜುನಾಥ ಭೀಮಕ್ಕನವರ, ಮಾತನಾಡಿ ಈ ಸಸಿಗಳು ಹೆಮ್ಮರವಾಗಿ ಬೆಳೆಯಬೇಕು, ವಿದ್ಯಾರ್ಥಿಗಳು, ಈ ಸಸಿಗಳ ಪಾಲನೆ ಪೋಷಣೆ ಮಾಡಬೇಕು, ಜೂನ ತಿಂಗಳು ತುಂಬಾ ಮಹತ್ವದ ದಿನ ರೈತರು ಭೂಮಿಗೆ ಭೀಜ ಬಿತ್ತುವ ಕಾಲ ಅದೇ ರೀತಿ ಮಕ್ಕಳಿಗೆ ಅಕ್ಷರದ ಬೀಜ ಬಿತ್ತುವುದು, ಹಾಗೇಯೆ ವಿಶ್ವಪರಿಸರ ದಿನ ಅಂದರೆ ಈ ದಿನ ಎಲ್ಲೆಡೆ ಸಸಿಗಳನ್ನು ನೆಡುವುದು,ಜೊತೆಗೆ ಪರಿಸರ ಜಾಗೃತಿ ಮೂಡಿಸು ದಿನವಾಗಿದೆ ಎಂದರು.

ARFO ಶ್ರೀಮತಿ ಹಳ್ಳಿ, ಮೊರಾರ್ಜಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಚವಡಿ,ಹೆಬ್ಬಳ್ಳಿ ಗ್ರಾ ಪ ಅಧ್ಯಕ್ಷರಾದ ಶ್ರೀಮತಿ ತೇಜಸ್ವಿನಿ ತಲವಾಯಿ, ಉಪಾಧ್ಯಕ್ಷರಾದ ವಿಠ್ಠಲ ಇಂಗಳೆ, ಸದಸ್ಯರಾದ ಮಂಜುನಾಥ ವಾಸಂಬಿ, ಸುರೇಶ ಬನ್ನಿಗಿಡದ, ಶ್ರೀಮತಿ ರೇಖಾ ನಾಯಕರ ಹಾಜರಿದ್ದರು. ಕಾರ್ಯಕ್ರಮವನ್ನು PDO ತನ್ವಿರ್ ನೆರವೇರಿಸಿದರು.

Related Articles

Leave a Reply

Your email address will not be published. Required fields are marked *

Back to top button