ಸ್ಥಳೀಯ ಸುದ್ದಿ

ಪವರ್ ಸಿಟಿ ನ್ಯೂಸ್ ಇಂಪ್ಯಾಕ್ಟ್: ಹಲ್ಲೆ ಮಾಡಿದ ಪುಂಡರ ಕೈಗೆ ಬಿತ್ತು ಕೊಳ

Powercity news impact

ಹುಬ್ಬಳ್ಳಿ

ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದೆ. ಕ್ಷುಲ್ಲಕ ಕಾರಣಕ್ಕೆ ಹಲ್ಲೆ ಮಾಡುವವರ ಕೈಗೆ ಕೊಳ ತೋಡಿಸುವಲ್ಲಿ ನಿಮ್ಮ ಪವರ್ ಸಿಟಿ ನ್ಯೂಸ್ ಮಹತ್ವದ ಪಾತ್ರ ನಿರ್ವಹಿಸಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ನಡೆದ ಘಟನೆ ಬಿಗ್ ಇಂಪ್ಯಾಕ್ಟ್ ಆಗಿದೆ.

ಹೌದು.. ವಿದ್ಯಾನಗರದ ಜನನಿಬಿಡ ಪ್ರದೇಶದಲ್ಲಿರುವ ವಿಶಾಲ್ ಮೆಗಾ ಮಾರ್ಟ್ ಸ್ಟೋರ್ ಮ್ಯಾನೇಜರ್ ಮೇಲೆ ಹಲ್ಲೆ ನಡೆಸಿದ್ದಲ್ಲದೆ ಪೊಲಿಸ್ ಕಂಪ್ಲೇಟ್ ಕೊಟ್ಟರೆ ಕಬ್ಬಿನ ಹೊಲದಲ್ಲಿ ಸುಡುವುದಾಗಿ ಜೀವ ಬೆದರಿಕೆ ಒಡ್ಡಿದ್ದನ್ನು ವೀಡಿಯೋ ಸಮೇತ ಪವರ್ ಸಿಟಿ ನ್ಯೂಸ್ ಸುದ್ದಿ ಬಿತ್ತರಿಸಿತ್ತು. ವರದಿಗೆ ಎಚ್ಚೇತ್ತುಕೊಂಡು ಪೊಲೀಸರು ಹಲ್ಲೆ ಮಾಡಿದವರ ವಿರುದ್ಧ ಸೂಕ್ತ ಕ್ರಮ ಜರುಗಿಸಿದ್ದು, ಪವರ್ ಸಿಟಿ ನ್ಯೂಸ್ ಬಿಗ್ ಇಂಪ್ಯಾಕ್ಟ್ ಆಗಿದೆ.

ಘಟನೆ ನಡೆದು ಮೂರು ದಿನಗಳಾದರೂ ಆರೋಪಿ ಮಾತ್ರ ಪೊಲಿಸರ ಕೈಗೆ ಸಿಗದೆ ಆಟ ಆಡಿಸುತ್ತಿದ್ದ. ಪ್ರಕರಣದ ಕುರಿತು ವರದಿಯ ಪಾಲೋ ಅಫ್ ಮಾಡುವ ಮೂಲಕ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತನಿಖೆ ನಡೆಸಿದ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಮಹಾಂತೇಶ ಹೂಳಿಯವರು ಆರೋಪಿಗಳಾದ 1) ಬಸವರಾಜ್ ಕೆಲಗೇರಿ(46) 2)ನೀತಿನ್ ಕೆಲಗೇರಿ (20)
3)ಚೇತನ ಕಬ್ಬೂರ (25)
4) ಅಭಿಷೇಕ ಮೂಳೆ (30)
ಆರೋಪಿಗಳನ್ನ ವಿಚಾರಣೆ ನಡೆಸಿ ಇನ್ನುಳಿದ ಆರೋಪಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಆದರೆ ಘಟನೆಯಲ್ಲಿ ದೋಚಿರುವ ವಸ್ತುಗಳು ಇನ್ನೂ ಪತ್ತೆಯಾಗದಿರುವುದರಿಂದ ಘಟನೆ ಪೋಲಿಸರಿಗೆ ಸವಾಲಾಗಿ ಪರಿಣಮಿಸಿದ್ದು.ಘಟನೆಯಲ್ಲಿ ಭಾಗಿಯಾದ ಪುಡಾರಿಗಳ ಬಂದನದ ನಂತರವೆ ಅಸಲಿಯತ್ತು ಹೊರ ಬಿಳಲಿದೆ.

ಪವರ್ ಸಿಟಿ ನ್ಯೂಸ್ ಹುಬ್ಬಳ್ಳಿ

Related Articles

Leave a Reply

Your email address will not be published. Required fields are marked *

Back to top button