ಸ್ಥಳೀಯ ಸುದ್ದಿ
ಪ್ರಧಾನಿಗೆ ಗೀಪ್ಟ್ ಕೊಡಲು ಸಿದ್ಧವಾಗಿದೆ ಧಾರವಾಡದ ಮಣ್ಣಿನ ಪ್ರತಿಮೆ

ಧಾರವಾಡ
ಧಾರವಾಡದ ಮಣ್ಣಿನ ಸೊಗಡನ್ನು ಮೋದಿಗೆ ಪರಿಚಯಿಸಲು ಧಾರವಾಡದ ಯುವಕ ಮುಂದಾಗಿದ್ದಾನೆ.

ರಾಷ್ಟ್ರೀಯ ಯುವಜನೋತ್ಸವದಲ್ಲಿ ಮೋದಿ ಗಮನ ಸೆಳೆಯಲಿದ್ದಾರೆ ಈ ಧಾರವಾಡದ ವಿಶೇಷ ಯುವಕ.
ಧಾರವಾಡದ ಕೆಲಗೇರಿಯ ಖ್ಯಾತ ಕಲಾವಿದ ಮಂಜುನಾಥ ಹಿರೇಮಠ ಪುತ್ರ ಲೋಹಿತ್ ನಿರ್ಮಿಸಿರುವ ಮಣ್ಣಿನ ಪ್ರತಿಮೆ ಇದು.

ಬೇಲೂರು ಶಿಲಾಬಾಲಕೆಯ 15 ಇಂಚಿನ ಮಣ್ಣಿನ ಪ್ರತಿಮೆ ಕೆತ್ತಿರುವ ಯುವ ಕಲಾವಿದ ಲೋಹಿತ್ ಕಾರ್ಯಕ್ಕೆ ಎಲ್ಲೇಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಸುಂದರವಾಗಿ ಕೆತ್ತಿರುವ ಈ ಮಣ್ಣಿನ ಪ್ರತಿಮೆಯನ್ನು ಪ್ರಧಾನಿಗೆ ಗೀಪ್ಟ್ ಕೊಡುವಲ್ಲಿ ಸ್ವಲ್ಪ ಗೊಂದಲ ಉಂಟಾಗಿದೆ.

ಪ್ರಧಾನಿ ಗೀಪ್ಟ್ ಕೊಡುವುದು ಹೇಗೆ ಎನ್ನುವ ಗೊಂದಲದಲ್ಲಿ ಮಂಜುನಾಥ ಹಿರೇಮಠ ಕುಟುಂಬ ಇದೆ.
ಜಿಲ್ಲಾಡಳಿತ ಈ ಸಮಸ್ಯೆಯನ್ನು ಯಾವ ರೀತಿ ಬಗೆಹರಿಸಿ ಯುವ ಕಲಾವಿದ ಕಲೆಗೆ ಬೆಲೆ ಕೊಡುತ್ತೆ ಎನ್ನುವುದನ್ನು ನೋಡಬೇಕಿದೆ.