ಸ್ಥಳೀಯ ಸುದ್ದಿ
ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು: ಸಿಎಂ ಸಿದ್ದರಾಮಯ್ಯ ವ್ಯಂಗ್ಯ


ಬೆಂಗಳೂರು: ಗಾಂಧಿ ಕೊಂದ ಬಿಜೆಪಿಯವರು ಗೋಡ್ಸೆ ಪ್ರತಿಮೆ ಮುಂದೆ ಧರಣಿ ಮಾಡಬೇಕಿತ್ತು ಅಂತ ಸಿಎಂ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ದ ವ್ಯಂಗ್ಯವಾಡಿದ್ದಾರೆ.
ವಿಧಾನಪರಿಷತ್ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡುತ್ತ ಗಾಂಧಿ ಪ್ರತಿಮೆ ಮುಂದು ಕುಳಿತು ಬಿಜೆಪಿಯವರು ಧರಣಿ ನಡೆಸಿದಾರೆ, ಆದರೆ ಅವರು ಗಾಂಧಿ ಕೊಂದವರು ಅದೇ ಪ್ರತಿಮೆ ಮುಂದೆ ಧರಣಿ ನಡೆಸಿದ್ದು ವಿಪರ್ಯಾಸ ಅವರು ಗಾಂಧಿ ಪ್ರತಿಮೆ ಮುಂದೆ ಬದಲು ಗೋಡ್ಸೆ ಪ್ರತಿಮೆ ಮುಂದೆ ಧರಣಿ ನಡೆಸಬೇಕಾಗಿತ್ತು ಕಿಡಿಕಾರಿದರು.

ಇದೇ ವೇಳೆ ಅವರು ಕ್ಕೆ ಬಿಜೆಪಿಯವರಿಗೆ ನೈತಿಕತೆ ಇದೆಯಾ? ಸಮಾಜ ಒಡೆಯುವವರು ಈಗ ಹೋಗಿ ಗಾಂಧಿ ಮುಂದೆ ಕೂತಿದ್ದಾರೆ ಅಂಥ ಅವರು ಚಾಟಿ ಬೀಸಿದರು.