ಸ್ಥಳೀಯ ಸುದ್ದಿ

ಭಾವೈಕ್ಯತೆಗೆ ಸಾಕ್ಷಿಯಾದ ಧಾರವಾಡ

ಧಾರವಾಡ

ಗಣೇಶ ಹಬ್ಬದ ವಿಸರ್ಜನೆಯಲ್ಲಿ ಹಿಂದೂ ಮುಸ್ಲಿಂ ಭಾಯಿ ಭಾಯಿ ಎನ್ನುವ ಮೂಲಕ ಭಾವೈಖ್ಯತೆಗೆ ಸಾಕ್ಷಿಯಾದ ಧಾರವಾಡ ಜಿಲ್ಲೆಯಲ್ಲಿ ಇದೀಗ ಅದೇ ರೀತಿಯಲ್ಲಿ ಹೋಳಿ ಹಬ್ಬದಲ್ಲಿಯೂ ಮತ್ತೊಮ್ಮೆ ಸುದ್ದಿಯಾಗಿದೆ.

ಧಾರವಾಡದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಹೋಳಿ ಹಬ್ಬದಂದು ನಡೆದ ಹಲಗೆ ಮೆರವಣಿಗೆಯಲ್ಲಿ ಈ ಬಾರಿ ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಹಾಗೂ ಮೇಯರ್ ಈರೇಶ ಅಂಚಟಗೇರಿ ಚಾಲನೆ, ಬಯಲು ಸೀಮೆ ಅಭಿವೃದ್ಧಿ ಮಂಡಳಿ ಅಧ್ಯಕ್ಷ ತವನಪ್ಪ ಅಷ್ಟಗಿ ಚಾಲನೆ ನೀಡಿದ್ರು.

ಈ ಹಲಗೆ ಮೆರವಣಿಗೆಯಲ್ಲಿ ಹಲಗೆ ಬಾರಿಸುತ್ತಾ ಸಾಗುತ್ತಿದ್ದ, ಹಿಂದೂಪರ ಸಂಘಟನೆ ಮುಖಂಡರಿಗೆ ಧಾರವಾಡದ ರೌನಕಪೂರ ಮಸೀದಿಯ ಮುಸ್ಲಿಂ ಸಮಾಜದವರು ಮಸೀದಿ ಮುಂದೆ ನಿಂತು ಶರಬತ್ ವಿತರಣೆ ಮಾಡಿದ್ರು.

ಈ ಸಂದರ್ಭದಲ್ಲಿ ರಾಕೇಶ ನಾಜರೆ, ಪಾಲಿಕೆ ಸದಸ್ಯ ಶಂಕರ ಶೆಳಕೆ ಸೇರಿದಂತೆ ಮುಸ್ಲಿಂ ಸಮಾಜದವರು ಹಾಗೂ ಹಿಂದೂಪರ ಸಂಘಟನೆಯವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button