ಸ್ಥಳೀಯ ಸುದ್ದಿ

ಮಳೆ ಆವಾಂತರದ ಹಿನ್ನೆಲೆ ಶ್ರೀನಗದಲ್ಲಿ ಮನೆಗಳಿಗೆ‌ ನುಗ್ಗಿದ ನೀರು

ಧಾರವಾಡ

ನಿನ್ನೆ ರಾತ್ರಿ ಸುರಿದ ಧಾರಾಕಾರ ಮಳೆಗೆ ಮಳೆ‌ ನೀರು ಮನೆಗಳಿಗೆ ನುಗ್ಗಿ ಅವಾಂತರವಾದ ಘಟನೆ ಧಾರವಾಡದ ಶ್ರೀನಗರದಲ್ಲಿ ನಡೆದಿದೆ.

ಪ್ರತಿ ವರ್ಷದ ಈ ಸಮಸ್ಯೆಯನ್ನು ಅಧಿಕಾರಿಗಳು‌ ನಿರ್ಲಕ್ಷ್ಯವಹಿಸುತ್ತಿದ್ದಾರೆ ಎಂದು ಸ್ಥಳೀಯರು ಜಯಕರ್ನಾಟಕದ ಮುಖಂಡರೊಂದಿಗೆ ಮಹಾನಗರ ಪಾಲಿಕೆ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ್ರು.

ವಾರ್ಡ್ ನಂಬರ್ 5 ರಲ್ಲಿರುವ ದೈವಜ್ಞನಗರ 2 ನೇ ಮುಖ್ಯ ರಸ್ತೆಯ ಒಳಚರಂಡಿಯ ನೀರು ಹಲವು ವರ್ಷಗಳಿಂದ ಅಕ್ಕ – ಪಕ್ಕದ ಮನೆಯ ಒಳಗೆ ನುಗ್ಗಿ, ಜನರಿಗೆ ತುಂಬಾ ತೊಂದರೆಯಾಗುತ್ತಿದೆ.

ನಮ್ಮ ವೇದಿಕೆಯಿಂದ ಅನೇಕ ಬಾರಿ ಮನಿ ಸಲ್ಲಿಸಿದರೂ ಕೂಡ ಇತ್ತೀಚಿಗೆ ತಾತ್ಕಾಲಿಕ ಪರಿಹಾರ ಮಾಡಿದ್ದು ಇರುತ್ತದೆ, ಈಗ ಮತ್ತೆ ಮಳೆಗೆ ಮನೆಯ ಒಳಗೆ ಒಳ ಚರಂಡಿ ನೀರು ನುಗ್ಗಿದೆ. ಆದಕಾರಣ ಈ ಒಳಚರಂಡಿ ಸಮಸ್ಯೆಯನ್ನು ಶೀಘ್ರವಾಗಿ ಶಾಶ್ವತವಾಗಿ ಬಗೆಹರಿಸಿಕೊಡಬೇಕೆಂದು ವೇದಿಕೆಯ ರಾಜ್ಯ ಉಪಾಧ್ಯಕ್ಷರಾದ ಮುತ್ತು ಬೆಳ್ಳಕ್ಕಿ ನೇತೃತ್ವದಲ್ಲಿ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾ ಮುಖಂಡರಾದ ಮಲ್ಲಿಕಾರ್ಜುನ್ ಅಸುಂಡಿ, ಅಶೋಕ್ ಯಾದವ್, ಶಂಕರ್ ಲೋಹಾರ, ಸೋಮು ಬೈಲವಾಡ, ವಸಂತ್ ಕುನ್ನೂರ್, ಸಂತೋಷ್ ಹುಗ್ಗಿ, ಸಂತೋಷ್ ಪಾಟೀಲ್,
ಬಸವರಾಜ್ ಅಡಪ್ನವರ, ಪ್ರಶಾಂತ್ ಟೆಲ್ಲಿ, ಪ್ರಸನ್ನ ಶೆಟ್ಟಿ, ಫಾರೂಕ್ ಟಿ, ಮಂಜುನಾಥ್ ಎಚ್, ರವಿ ನವಲಗುಂದ, ಸಾವಿತ್ರಿ ಬೆಳ್ಳಕ್ಕಿ, ಕಸ್ತೂರಿ ಚಿಮ್ಮನಕಟ್ಟಿ, ಪವಿತ್ರಾ ಬಾವಿಕಟ್ಟಿ, ಮುಂತಾದವರು ಉಪಸ್ಥಿದ್ದರು.

Related Articles

Leave a Reply

Your email address will not be published. Required fields are marked *

Back to top button