ಸ್ಥಳೀಯ ಸುದ್ದಿ

ಮಾಜಿ ಸಿಎಂ ಜಗದೀಶ ಶೆಟ್ಟರ ಕಾಂಗ್ರೆಸ್ ಸೇರ್ಪಡೆ ಆನೆ ಬಲ ಬಂತದಾಗಿದೆ.

ಸವದತ್ತಿ

ಇತ್ತೀಚಿಗೆ ಬಿಜೆಪಿ ಬಿಟ್ಟು ಕಾಂಗ್ರೆಸ ಸೇರಲು ನಿರ್ಧಾರ ಮಾಡಿರುವ ಶೆಟ್ಟರ ಅವರ ನಡೆ ಸ್ವಾಗತಾರ್ಹ ಎಂದು ಮಾಜಿ ಸಚಿವ ವಿನಯ ಕುಲಕರ್ಣಿ ಹೇಳಿದ್ರು.

ಸವದತ್ತಿಯಲ್ಲಿ ಮಾತನಾಡಿದ ವಿನಯ ಕುಲಕರ್ಣಿ ಕಾಂಗ್ರೆಸ್ ಪಕ್ಷದ 17 ಮಂದಿ ಶಾಸಕರನ್ನ ಕರೆದುಕೊಂಡು ಹೋಗಿ ಸರ್ಕಾರ ಮಾಡಿದ್ರು. ಡಿಕೆಶಿ ಶೆಟ್ಟರ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡಿದ್ದು ತಪ್ಪೇನಿಲ್ಲಾ ಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಹಲವಾರು ಮಂದಿ ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ . ಇನ್ನು ಹಲವಾರು ಮಂದಿ‌ ಸೇರ್ತಾರೆ ಎಂದು ವಿನಯ ಕುಲಕರ್ಣಿ ಹೇಳಿದ್ರು.

ಉತ್ತರ ಕರ್ನಾಟಕದ ಪ್ರಭಾವಿ ಲಿಂಗಾಯತ್ ನಾಯಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿರುವುದು ಧಾರವಾಡ ಜಿಲ್ಲೆಯಲ್ಲಿ ಆನೆಬಲ ಬಂದಂತೆ ಆಗಿದೆ ಎಂದು ವಿನಯ ಕುಲಕರ್ಣಿ ವಿಶ್ವಾಸ ವ್ಯಕ್ತಪಡಿಸಿದ್ರು.

ರಾಜ್ಯದಲ್ಲಿ 40 % ಕಮಿಶನ್ ಸರ್ಕಾರ ಇದೆ. ಅದರಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ 10% ಕಮಿಶನ್ ಪಡಿತಾರೆ ಎನ್ನುವ ಆರೋಪವನ್ನು ಬಿಜೆಪಿಯ ನಾಯಕ ಅಷ್ಟಗಿ ಅವರು ಮಾಡಿದ್ದಾರೆ. ಇದನ್ನು ಜನರೇ‌ನಿರ್ಣಯ ಮಾಡಬೇಕು ಎಂದರು.‌

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಬಹಳಷ್ಟು ‌ಮಂದಿ‌ ನಾನು ಮಾಡಿರುವ ಅಭಿವೃದ್ಧಿ ‌ಕೆಲಸಗಳನ್ನು ನೋಡಿ ಪಕ್ಷಕ್ಕೆ ಸೇರ್ಪಡೆ ಗೊಂಡಿದ್ದಾರೆ. ಬಿಜೆಪಿಯಲ್ಲಿ ಅಸಮಾಧಾನಿತ ನಾಯಕರು ನಮ್ಮ ಪಕ್ಷಕ್ಕೆ ಬರಬಹುದು. ಅವರಿಗೆ ಯಾವತ್ತಿದ್ದರೂ ಕಾಂಗ್ರೆಸ್ ಪಕ್ಷದ ಬಾಗಿಲು ತೆರೆದಿರುತ್ತೆ‌ ಎಂದರು.
ಇದೇ ಸಂಧರ್ಭದಲ್ಲಿ ಬಿಜೆಪಿ ತೊರೆದು ಸುಮಾರು ಐದನೂರು ಕಾರ್ಯಕರ್ತರು ಕಾಂಗ್ರೆಸ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ ಏಗನಗೌಡರ,ಚನಬಸಪ್ಪ ಮಟ್ಟಿ,ಸಿದ್ದಣ್ಣ ಪ್ಯಾಟಿ,ಶಿವಾನಂದ ಮೆನಸಿನಕಾಯಿ,ಭೀಮಪ್ಪ ಕಸಾಯಿ,ಅಶೋಕ ದೊಡಮನಿ,ಸೇರಿದಂತೆ ವಿವಿಧ ಗ್ರಾಮಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ದರು.

Related Articles

Leave a Reply

Your email address will not be published. Required fields are marked *

Back to top button