ಸ್ಥಳೀಯ ಸುದ್ದಿ

ಮೇಯರ್ ಆಗಿ ವೀಣಾ ಭರದ್ವಾಡ- ಉಪಮೇಯರ್ ಆಗಿ ಸತೀಶ ಹಾನಗಲ್ ಆಯ್ಕೆ

ಧಾರವಾಡ

ಧಾರವಾಡ ಜಿಲ್ಲೆಯಲ್ಲಿ ಮತ್ತೊಂದು ಅವಧಿಗೆ ಬಿಜೆಪಿ ಪಕ್ಷ
ಮಹಾನಗರ ಪಾಲಿಕೆಯ ಮೇಯರ್-ಉಪಮೇಯರ ಅಧಿಕಾರ ಗದ್ದುಗೆ ಹಿಡಿದಿದೆ.‌

ಆಪರೇಶನ್ ಹಸ್ತ ಮಾಡ್ತಾರೆ ಎನ್ನುವ ಭೀತಿಯಲ್ಲಿ‌ ಬಿಜೆಪಿ ಪಾಲಿಕೆ ಸದಸ್ಯರು ದಾಂಡೇಲಿ‌ ರೆಸಾರ್ಟ‌ ಸೇರಿದ್ದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಂತ್ರಗಾರಿಕೆ ಮುಂದೆ ಕಾಂಗ್ರೆಸ್ ನಾಯಕರು ಮಂಕಾಗಿ ಹೋಗಿದ್ದಾರೆ.‌

ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ 22 ನೇ ಅವಧಿಗೆ ನಡೆದ ಚುನಾವಣೆಯಲ್ಲಿ ಮಹಾಪೌರರಾಗಿ ಶ್ರೀಮತಿ ವೀಣಾ ಚೇತನ ಬರದ್ವಾಡ ಹಾಗೂ ಉಪಮಹಾಪೌರರಾಗಿ ಶ್ರೀ ಸತೀಶ ಸುರೇಂದ್ರ ಹಾನಗಲ್ ಆಯ್ಕೆಯಾಗಿದ್ದಾರೆ ಎಂದು‌ ಬೆಳಗಾವಿ ಪ್ರಾದೇಶಿಕ ಆಯುಕ್ತ ನಿತೇಶ ಪಾಟೀಲ ಚುನಾವಣಾ ಫಲಿತಾಂಶ ಘೋಷಣೆ ಮಾಡಿದ್ರು.‌

ಉಪಮಹಾಪೌರರಾಗಿ ಪಾಲಿಕೆಯ 32 ನೇ ವಾರ್ಡ್ ಸದಸ್ಯ ಶ್ರೀ ಸತೀಶ ಸುರೇಂದ್ರ ಹಾನಗಲ್ ಅವರು ಅತಿ ಹೆಚ್ಚು ( 46) ಮತಗಳನ್ನು ಪಡೆಯುವ ಮೂಲಕ ಆಯ್ಕೆ ಆಗಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿ ಆಗಿರುವ ಬೆಳಗಾವಿ ಪ್ರದೇಶಿಕ ಆಯುಕ್ತ ನಿತೇಶ ಪಾಟೀಲ ಪ್ರಕಟಿಸಿದರು.

ಮಹಾಪೌರ ಸ್ಥಾನಕ್ಕೆ ಸ್ಪರ್ಧಿಸಿದ್ದ ಮಹಾನಗರಪಾಲಿಕೆಯ 04 ವಾರ್ಡ್ ಸದಸ್ಯ ಶ್ರೀ ರಾಜಶೇಖರ ಕಮತಿ ಅವರು 37 ಮತಗಳನ್ನು ಪಡೆದ್ರೆ, ಇನ್ನೊರ್ವ ಸ್ಪರ್ಧಾಳು ಪಾಲಿಕೆಯ 71 ವಾರ್ಡ್ ಸದಸ್ಯ ಶ್ರೀ ನಜೀರ ಅಹ್ಮದ ಮೆಹಬೂಬಸಾಬ ಹೊನ್ಯಾಳ ಅವರು 03 ಮತಗಳನ್ನು ಪಡೆದಿದ್ದಾರೆ ಎಂದು ಚುನಾವಣಾ ಅಧ್ಯಕ್ಷಾಧಿಕಾರಿ ಆಗಿರುವ ಬೆಳಗಾವಿ ಪ್ರದೇಶಿಕ ಆಯುಕ್ತ ನಿತೇಶ ಪಾಟೀಲ ಪ್ರಕಟಿಸಿದರು.

Related Articles

Leave a Reply

Your email address will not be published. Required fields are marked *

Back to top button