ಸ್ಥಳೀಯ ಸುದ್ದಿ

ರಾಜ್ಯದಲ್ಲಿ ಭ್ರಷ್ಟ ಸರ್ಕಾರ ತಾಂಡವಾಡುತ್ತಿದೆ:- ಜಿ.ಎಸ್.ಪಾಟೀಲ್

ಮುಂಡರಗಿ:ತಾಲೂಕಿನ ಮುರುಡಿ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ಯೋಜನೆಗಳಾದ ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಯ ಗ್ಯಾರಂಟಿ ಕಾರ್ಡ್ ವಿತರಣೆ ಮಾಡಿದ ರೋಣ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಜಿ ಎಸ್ ಪಾಟೀಲ್ಈ ಸಂದರ್ಭದಲ್ಲಿ ಮಾತನಾಡಿದ ಅವರು ರಾಜ್ಯದಲ್ಲಿ ಸುಳ್ಳು ಭರವಸೆ ನೀಡಿ ಬೆಲೆ ಏರಿಸಿ ಜನಸಾಮಾನ್ಯರ ಜೊತೆ ಚೆಲ್ಲಾಟವಾಡಿದ ಬಿಜೆಪಿ ಪಕ್ಷ ಭ್ರಷ್ಟ ಸರ್ಕಾರ ತಾಂಡವಾಡುತ್ತಿದೆ ಹೀಗಾಗಿ ಕಾಂಗ್ರೆಸ್ ಪಕ್ಷ ಜನರಿಗಾಗಿ ಹಲವಾರು ಭಾಗ್ಯಗಳನ್ನು ತಂದಿದೆ ಅದರಲ್ಲಿ ಪ್ರಮುಖವಾಗಿ ಗೃಹಲಕ್ಷ್ಮಿ ಯೋಜನೆಯಡಿ ಪ್ರತಿ ಕುಟುಂಬದ ಮುಖ್ಯ ಮಹಿಳೆಗೆ ಎರಡು ಸಾವಿರ ರೂಪಾಯಿ ಅವರ ಖಾತೆಗೆ ಜಮ್ಮವಾಗುತ್ತದೆ ಹಾಗೆ ಪ್ರತಿ ಮನೆಗೂ ಎರಡು ನೂರು ಯೂನಿಟ್ ವಿದ್ಯುತ್ ಉಚಿತ ಮತ್ತು ಪ್ರತಿ ಕುಟುಂಬದ ಸದಸ್ಯರಿಗೂ 10 ಕೆಜಿ ಅಕ್ಕಿ ನೀಡುತ್ತೇವೆ ನಮ್ಮ ಸರಕಾರ ಅಧಿಕಾರಕ್ಕೆ ಬಂದ 24 ಗಂಟೆಯಲ್ಲಿ ಜಾರಿ ಮಾಡುತ್ತೇವೆ ನಮ್ಮದು ಗ್ಯಾರಂಟಿ ಸರ್ಕಾರ ಹೀಗಾಗಿ ಗ್ಯಾರಂಟಿ ಕಾರ್ಡ್ ನೀಡುತ್ತೇವೆ ಹಲವಾರು ಭಾಗ್ಯಗಳನ್ನು ನೀಡಿದ್ದು ನಮ್ಮ ಸಿದ್ದರಾಮಯ್ಯನವರ ಸಾಧನೆ ಹಲವಾರು ಯೋಜನೆಗಳನ್ನು ಈ ಸರಕಾರ ಬಂದು ಮಾಡಿದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಮತ್ತೆ ಎಲ್ಲ ಯೋಜನೆಗಳನ್ನು ಆರಂಭ ಮಾಡುತ್ತೇವೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಡಿ ಡಿ ಮೊರನಾಳ. ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜ್ಯೋತಿ ಕುರಿ. ಸುರೇಶ್ ಮಾಗಡಿ. ಬಸವರಾಜ್ ಬಿಸನಹಳ್ಳಿ. ದೂದಪೀರ ಕಾತರಕಿ. ಮತ್ತು ಮುರುಡಿ ಗ್ರಾಮದ ಸೋಮಪ್ಪ ಕೊಡ್ಲಿ. ಹನುಮರೆಡ್ಡಿ ರಾಜೂರ ದೇವಪ್ಪ ನವಲಿ‌. ಗೌರಮ್ಮ ಬಂಡಿ ವಡ್ಡರ್. ಭೀಮರೆಡ್ಡಿ ರಾಜೂರ. ಮರಡೇಪ್ಪ ಹಳ್ಳಿ. ಮಲ್ಲಿಕಾರ್ಜುನ್ ಕೊಡ್ಲಿ. ಹಾಲಪ್ಪ ಹಳ್ಳಿ ಗ್ರಾಮ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮಹಿಳೆಯರು ಉಪಸ್ಥಿತರಿದ್ದರು

Related Articles

Leave a Reply

Your email address will not be published. Required fields are marked *

Back to top button