ಸ್ಥಳೀಯ ಸುದ್ದಿ

ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗ್ಯಾಸ ಲೀಕ್ ಪ್ರಾಬ್ಲಂ- ಹೈರಾಣದ ಧಾರವಾಡ ಜಿಲ್ಲೆಯ ಜನಪ್ರತಿನಿಧಿಗಳು

ಧಾರವಾಡ

ಧಾರವಾಡ ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬರುವ ಹೈಕೋರ್ಟ್ ಸಮೀಪದಲ್ಲಿ ಸೇತುವೆಯ ಕೆಳಗಡೆ ಸಿಲುಕಿಗೊಂಡಿರುವ ಗ್ಯಾಸ್ ಟ್ಯಾಂಕರ್ ಅನಾಹುತವಾಗದಂತೆ ಪೊಲೀಸರು ತೀವ್ರ ನಿಗಾವನ್ನ ವಹಿಸಿದ್ದು, ಬಹುತೇಕ ಮೂವತ್ತು ಕಿಲೋಮೀಟರ್ ರಸ್ತೆ ಬಂದ್ ಆಗಿದೆ.

ಬೃಹದಾಕಾರದ ಗ್ಯಾಸ್ ಟ್ಯಾಂಕರ್ ಸೇತುವೆ ಕೆಳಗಡೆ ಹಾಯ್ದು ಹೋಗುವಾಗ ಮೇಲೆ ಬಡಿದು ಗ್ಯಾಸ್ ಲೀಕ್ ಆಗಿದೆ. ತಕ್ಷಣವೇ ಅಲ್ಲಿಂದ ಇಳಿದು ಹೋದ ಚಾಲಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

ಸುಮಾರು ನಾಲ್ಕೂವರೆಯಿಂದಲೇ ಕಾರ್ಯಾಚರಣೆ ಆರಂಭವಾಗಿದ್ದು, ಸುತ್ತಮುತ್ತಲಿನ ವಿದ್ಯುತ್ ಸಂಪರ್ಕವನ್ನ ಕಡಿತಗೊಳಿಸಲಾಗಿದೆ. ಬೆಳಗಾವಿ ರಸ್ತೆಯಲ್ಲಿ ಬಾಗೇವಾಡಿ ತನಕ, ಈ ಭಾಗದಲ್ಲಿ ತಡಸ ಕ್ರಾಸ್ ವರೆಗೂ ವಾಹನಗಳು ನಿಂತಿವೆ.

ಹುಬ್ಬಳ್ಳಿ ಧಾರವಾಡ ಬೆಳಗಾವಿಯ ಇತಿಹಾಸದಲ್ಲಿ ಇಂತಹದೊಂದು ಘಟನೆ ನಡೆದಿರಲಿಲ್ಲ. ಟ್ಯಾಂಕರ್‌ನಲ್ಲಿನ ಗ್ಯಾಸ್ ಲೀಕ್ ಆಗುವವರೆಗೂ ಏನೂ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ.

Related Articles

Leave a Reply

Your email address will not be published. Required fields are marked *

Back to top button